ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ರಾಜಸ್ಥಾನ ಮೂಲದ ಖತರ್ನಾಕ್ ಸೈಬರ್ ವಂಚಕನ ಬಂಧನ!

ದಾವಣಗೆರೆ: ಫ್ಲಿಫ್ ಕಾರ್ಟ್ ಪೇ ಲೆಟರ್ ಖಾತೆ ಹ್ಯಾಕ್ ಮಾಡುವ ಮೂಲಕ ಸೈಬರ್ ವಂಚನೆ ಮಾಡಿದ್ದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

23 ವರ್ಷದ ಅಮನ್ ತಿವಾರಿ ಬಂಧಿತ ಆರೋಪಿ. ಈತ ರಾಜಸ್ಥಾನ ಮೂಲದ ಅಲ್ವಾರ ನಗರದವನು. ಒಂದು ತಿಂಗಳ ಕಾಲ ಆ್ಯಪ್ ತರಬೇತಿ ಪಡೆದಿದ್ದ ಈತ, ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದ. ಈತ ಇದುವರೆಗೆ ಸಿಕ್ಕಿರಲಿಲ್ಲ. ಆದರೆ ದಾವಣಗೆರೆ ಪೊಲೀಸರು ರಾಜಸ್ತಾನಕ್ಕೆ ಹೋಗಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮನ್ ತಿವಾರಿ ಸುಮಾರು 40 ಸಾವಿರದಷ್ಟು EMAIL ಐಡಿಯ ಯೂಸರ್ ನೇಮ್, ಪಾಸ್ವರ್ಡ್ ಹ್ಯಾಕ್ ಮಾಡಿದ್ದ. ಈತ ಸುಮಾರು ಶೇಕಡ 47 ರಷ್ಟು EMAIL ಗಳನ್ನು ಓಪನ್ ಮಾಡಿದ್ದ ಈ ಚಾಲಾಕಿ. ಆದರೆ ಈತ ಪೊಲೀಸರಿಗೆ ಸಿಕ್ಕಿ ಬಿದ್ದಿರಲಿಲ್ಲ, ಪೊಲೀಸರ ಚಾಕಚಕ್ಯತೆಯಿಂದ ಸಿಕ್ಕಿ ಬಿದ್ದಿದ್ದಾನೆ ಎಂದು ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ:

ದೂರುದಾರರಾದ ರಕ್ಷಿತ್ ಎಂಬುವವರು ಫ್ಲಿಫ್ ಕಾರ್ಟ್ ಪೇ ಲೆಟರ್ ಖಾತೆಯನ್ನು ಹೊಂದಿದ್ದರು. ಈ ವರ್ಷದ ಜನವರಿ 21 ರಂದು ಅಪರಿಚಿತರು ನನ್ನ ಖಾತೆ ಹ್ಯಾಕ್ ಮಾಡಿದ್ದಾರೆ. ಪಾಸ್ವರ್ಡ್ ಬದಲಾಯಿಸಿ ಫ್ಲಿಫ್ ಕಾರ್ಟ್ ಪೇ ಲೆಟರ್ ಖಾತೆಯಿಂದ 45,000 ರೂಪಾಯಿ ವಂಚನೆ ಮಾಡಲಾಗಿದೆ ಎಂದು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Edited By : Manjunath H D
PublicNext

PublicNext

05/08/2022 07:17 pm

Cinque Terre

36.62 K

Cinque Terre

1

ಸಂಬಂಧಿತ ಸುದ್ದಿ