ಗೋಕಾಕ: ಜನ್ಮದಿನಾಚರಣೆಗಳಲ್ಲಿ ತಲ್ವಾರ್ ಬಳಸಿ ಕೇಕ್ ಕತ್ತರಿಸುವುದು ಕಾನೂನು ಬಾಹಿರವಾದರೂ ಇತ್ತೀಚೆಗೆ ಇದರ ಕ್ರೇಜ್ ಹೆಚ್ಚಾಗಿದೆ. ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಕೆಲವು ಕಿಡಿಗೇಡಿಗಳು ತಲ್ವಾರ್ ಬಳಸುತ್ತಿರುವುದು ಸಾಮಾನ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೇರಿಯ ಇಬ್ಬರು ದಿ.23ರಂದು ತಮ್ಮ ಹುಟ್ಟುಹಬ್ಬ ದಿನದಂದು ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಂಗನಕೇರಿ ಗ್ರಾಮದ ಮಲ್ಲಿಕ್ ನಧಾಪ್ ಹಾಗೂ ಅಶೋಕ ಗಾಡಿವಡ್ಡರ್ ಸೇರಿದಂತೆ ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಈ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದಿಯೋ ಗೊತ್ತಿಲ್ಲ. ವೈರಲ್ ವಿಡಿಯೋ ನೋಡಿಯಾದರೂ ಕ್ರಮಕೈಗೊಳ್ಳಬಹುದಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
PublicNext
25/07/2022 07:11 pm