ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು:ಫ್ಲೆಕ್ಸ್ ವಿಚಾರಕ್ಕೆ ಜಟಾಪಟಿ: ಹಾಲಿ-ಮಾಜಿ ಎಂಎಲ್ಎ ಗಳ ಹಿಂಬಾಲಕರ ಗುದ್ದಾಟ..

ತುಮಕೂರು : ಗ್ರಾಮಾಂತರ ಕ್ಷೇತ್ರದ ಮಸ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ.ಕೊರಟಗೆರೆ ಗ್ರಾಮದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರಿಂದ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ.

ತುಮಕೂರು ತಾಲೂಕಿನ ಡಿ.ಕೊರಟಗೆರೆ ಗ್ರಾಮದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ. ಡಿ.ಕೊರಟಗೆರೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವಕ್ಕೆ ಫ್ಲೆಕ್ಸ್ ಕಟ್ಟಲು ಶಾಸಕರ ಬೆಂಬಲಿಗರು ಮುಂದಾಗಿದ್ರು. ಈ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆಯಿಂದ ಜೆಡಿಎಸ್ ಕಾರ್ಯಕರ್ತ ಸಿರಾಜ್ ಹಾಗೂ ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ತುಮಕೂರು ನಗರದ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ್, ಚಂದ್ರು ಮತ್ತು ಬೆಂಬಲಿಗರು ಸೇರಿದಂತೆ 20 ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂದು ಸಿರಾಜ್ ಆರೋಪ‌ ಮಾಡಿದ್ದಾರೆ. ಹಾಲಿ ಮಾಜಿ ಶಾಸಕರ ಬೆಂಬಲಿಗರ ಬೀದಿ ರಂಪಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By :
PublicNext

PublicNext

25/07/2022 01:20 pm

Cinque Terre

39.91 K

Cinque Terre

0

ಸಂಬಂಧಿತ ಸುದ್ದಿ