ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಐ ಪರೀಕ್ಷಾ ಅಕ್ರಮ-ಮರುಪರೀಕ್ಷೆ ಆದೇಶ ಎತ್ತಿಹಿಡಿದ ಕೋರ್ಟ್ !

ಬೆಂಗಳೂರು:ಪಿಎಸ್‌ಐ ಪರೀಕ್ಷಾ ಅಕ್ರಮ ಕೇಸ್ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮರು ಪರೀಕ್ಷೆಗೆ ಆದೇಶ ನೀಡಿತ್ತು.ಅದನ್ನ ಈಗ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಎತ್ತಿ ಹಿಡಿದಿದೆ.

ಸರ್ಕಾರದ ಆದೇಶವನ್ನ ಎತ್ತಿ ಹಿಡಿದ KAT ಈ ನೇಮಕ ತುಂಬಾ ವ್ಯಾಪಕವಾಗಿದೆ. ಈ ಒಂದು ಪ್ರಕರಣದಲ್ಲಿ ಕಳಂಕಿತರು ಮತ್ತು ಕಳಂಕರಹಿತರನ್ನ ಪ್ರತ್ಯೇಕಿಸಲಾಗದು. ಈ ಕೇಸ್ ನಲ್ಲಿ ಸ್ವತಃ ನೇಮಕಾತಿ ವಿಭಾಗದ ಪ್ರಮುಖ ಅಧಿಕಾರಿನೇ ಬಂಧಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ಮರು ಪರೀಕ್ಷೆಯನ್ನ ಪರೀಕ್ಷಿಸಿ ಬೆಂಗಳೂರಿನ ಪವಿತ್ರಾ ಎಲ್‌.ಎನ್. ಸೇರಿದಂತೆ 28 ಜನ ಅಭ್ಯರ್ಥಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ಕೆಟಿಎ ನ್ಯಾಯಮಂಡಳಿ ವಿಭಾಗೀಯ ಪೀಠದ ನ್ಯಾಯಿಕ ಸದಸ್ಯರಾದ ಟಿ.ನಾರಾಯಣ ಸ್ವಾಮಿ ಮತ್ತು ಜಿ.ಲತಾ ಕೃಷ್ಣರಾವ್ ವಿಚಾರಣೆ ನಡೆಸಿದರು.

Edited By :
PublicNext

PublicNext

19/07/2022 06:09 pm

Cinque Terre

48.42 K

Cinque Terre

0