ತುಮಕೂರು: ಜಿಲ್ಲೆಯ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಲಕ್ಷ್ಮಿಕಾಂತ್ ರವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಬುಧವಾರ ಸಸ್ಪೆಂಡ್ ಮಾಡಲಾಗಿದೆ.
ಹಲವು ಪ್ರಕರಣಗಳ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಕೇಂದ್ರ ವಲಯ ಐಜಿಪಿ ರವರ ಅನುಮೋದನೆ ಪಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ರವರು ಸಸ್ಪೆಂಡ್ ಮಾಡಿದ್ದಾರೆ ಎಂದು ಎಂದು ತಿಳಿದು ಬಂದಿದೆ.
ಸಿಪಿಐ ಸಸ್ಪೆಂಡ್ ಬಗ್ಗೆ ಹಲವು ಪರ ಮತ್ತು ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಅಮಾನತ್ತಿಗೆ ನಿಖರವಾದ ಯಾವ ಪ್ರಕರಣಕ್ಕೆ ಕರ್ತವ್ಯ ಲೋಪವಾಗಿದೆ ಎನ್ನುವ ಮಾಹಿತಿ ಬಹಿರಂಗಪಡಿಸಿಲ್ಲ.
PublicNext
14/07/2022 11:23 am