ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೃತ್ ಪೌಲ್ ಮತ್ತೆ 3 ದಿನ ಸಿಐಡಿ ವಶಕ್ಕೆ

ಬೆಂಗಳೂರು : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪೊಲೀಸ್ ನೇಮಕಾತಿ ವಿಭಾಗದ ADGP ಯಾಗಿದ್ದ ಅಮೃತ್ ಪೌಲ್ ನನ್ನು ಸಿಐಡಿ ಇಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿತು.

ಈ ವೇಳೆ ನ್ಯಾಯಾಲಯ ಇನ್ನು 3 ದಿನ ಸಿಐಡಿ ವಶಕ್ಕೆ ನೀಡಿ ಆದೇಶ ನೀಡಿದ್ದು ಕುಟುಂಬ ಭೇಟಿ ಹಾಗೂ ಆನ್ ಲೈನ್ ಮೂಲಕ ವೈದ್ಯರ ಭೇಟಿಗೂ ಅವಕಾಶ ಕಲ್ಪಿಸಿದೆ. ಇನ್ನು ಇದೇ ಕೇಸ್ ನ ಆರೋಪಿಗಳಾದ DySP ಶಾಂತಕುಮಾರ್, ಶ್ರೀನಿವಾಸ್, ಹರ್ಷ, ಶ್ರೀಧರ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

Edited By : Nirmala Aralikatti
PublicNext

PublicNext

13/07/2022 07:29 pm

Cinque Terre

135.38 K

Cinque Terre

1

ಸಂಬಂಧಿತ ಸುದ್ದಿ