ಬೆಂಗಳೂರು: ಪಾಕಿಸ್ತಾನ್ ಇಂಟೆಲಿಜೆನ್ಸ್ ನಿಂದ ಡಿಫೆನ್ಸ್ ಮಾಹಿತಿಗಾಗಿ ಡಾರ್ಕ್ ಕಾಲ್ ಮಾಡ್ತಿದ್ದ ಬಗ್ಗೆ
ಇಂಡಿಯನ್ ಮಿಲಿಟರಿ ಮಾಹಿತಿ ಕಲೆ ಹಾಕಿತ್ತು.
ಮಾಹಿತಿ ಅನ್ವಯ ಸಿಸಿಬಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿ ಸಿಸಿಬಿ ನಕಲಿ ಕಾಲ್ ಕನ್ವರ್ಟ್ ಜಾಲವನ್ನ ಭೇದಿಸಿದ್ದಾರೆ. ಬಗಲಗುಂಟೆಯ ಮನೆಯಲ್ಲಿ ಸುಮಾರು 58 ಸಿಮ್ ಕನ್ವರ್ಟ್ ಬಾಕ್ಸ್ ನಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಸಿಮ್‌ಬಳಸಿ ಕಾಲ್ ಕನ್ವರ್ಟ್ ಮಾಡ್ತಿದ್ದ ಜಾಲವನ್ನ ಭೇದಿಸಿದ್ದಾರೆ.
ಕೇರಳದ ವಯನಾಡ್ ಮೂಲದ ಶರಾಫುದ್ದೀನ್ ಬಂಧನವಾಗಿದ್ದು, ಆರೋಪಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಿಮ್ ಬಾಕ್ಸ್ ಇಟ್ಟಿದ್ದ. ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಸಿಮ್ ಬಾಕ್ಸ್ ಇಟ್ಟು ಈ ಅಕ್ರಮ ನಡೆಸ್ತಿದ್ದ.
ಇನ್ನೂ ಹೊರ ರಾಜ್ಯದಿಂದ ಸಿಮ್ ಪಡೆದಿರುವ ಮಾಹಿತಿ ಸಿಕ್ಕಿದ್ದು. ಈ ಜಾಲದಿಂದ ಸಿಮ್ ಏಜೆಂಟ್‌ಗಳು ಮತ್ತು ಭಾಗಿಯಾಗಿರುವ ಶಂಕೆಯನ್ನ ಸಿಸಿಬಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
PublicNext
22/06/2022 04:16 pm