ಬೆಂಗಳೂರು: ರಾತ್ರಿ ನಡೆದ ಪಾರ್ಟಿಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಜೊತೆಗೆ ಬ್ಯುಸಿನೆಸ್ ಮ್ಯಾನ್ ಅಕೀಲ್ ಸೋನಿ, ಖಾಸಗಿ ಕಂಪನಿ ಉದ್ಯೋಗಿ ಹರ್ಜೋತ್ ಸಿಂಗ್ ರೆಫ್ರಿಯಗಿದ್ಸ್ ಹನಿ ಮತ್ತು ಫೋಟೋಗ್ರಾಫರ್ ಅಕೀಲ್ ಮೇಲೆ ಎಫ್ ಐ ಆರ್ ದಾಖಲಿಸಿ ಹಲಸೂರು ಪೊಲೀಸ್ರು ಬಂಧಿಸಿದ್ರು.
ಬಂಧಿತರನ್ನ ವಿಚಾರಣೆ ನಡೆಸಿರೋ ಪೊಲೀಸ್ರು ಆರೋಪಿಗಳಿಗೆ ಮೆಡಿಕಲ್ ಮಾಡಿಸಿ ತಡರಾತ್ರಿ ಸ್ಟೇಷನ್ ಬೇಲ್ ನಲ್ಲಿ ಆರೋಪಿಗಳನ್ನ ರಿಲೀಸ್ ಮಾಡಿದ್ದಾರೆ. ಶ್ಯೂರಿಟಿ ಮತ್ತು ಕಂಡಿಷನ್ ಮೇಲೆ ಸಿದ್ಧಾಂತ್ ನ ಬಿಡುಗಡೆಗೊಳಿಸಿದ್ದಾರೆ.
ವಿಚಾರಣೆಗೆ ಕರೆದಾಗ ಆರೋಪಿಗಳು ಹಾಜರಾಗಬೇಕು ಮತ್ತು ಸಾಕ್ಷ್ಯ ನಾಶಕ್ಕೆ ಕೈ ಹಾಕದಂತೆ ಪೊಲೀಸ್ರು ಸೂಚಿಸಿದ್ದಾರೆ. ಇನ್ನೂ ಪಾರ್ಟಿಯಲ್ಲಿ ಡ್ರಗ್ ಯಾರಿಂದ ಬಂತು ಹಾಗೂ ಡ್ರಗ್ ಮೂಲ ಯಾವುದೆಂದು ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.
PublicNext
14/06/2022 08:09 am