ಬೆಂಗಳೂರು:ಹೋಟೆಲ್ ನಲ್ಲಿ ಡ್ರಗ್ ಪಾರ್ಟಿ ನಡೆಯುತ್ತಿದ್ದ ವೇಳೆ ಹಲಸೂರು ಪೊಲೀಸರು ದಾಳಿ ನಡೆಸಿ 50 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.
ದಿ ಪಾರ್ಕ್ ಹೊಟೇಲ್ ಮೇಲೆ ಹಲಸೂರು ಪೊಲೀಸರು ದಾಳಿ ವೇಳೆ ಬಾಲಿವುಡ್ ನಟ ಶಕ್ತಿಕಪೂರ್ ಮಗ ಸಿದ್ದಾಂತ್ ಕಪೂರ್ ನ ಕೂಡ ಪಾರ್ಟಿಯಲ್ಲಿದ್ದ. ಈ ವೇಳೆ ಸಿದ್ದಾಂತ್ ನ ವಶಸಕ್ಕೆ ಪಡೆದದ್ದು, ಸಿದ್ದಾಂತ್ ಗೆ ಮೆಡಿಕಲ್ ಮಾಡಿಸಿದ್ದಿ ಸಿದ್ದಾಂತ್ ಕೂಡ ಡ್ರಗ್ ಪಡೆದಿರೋದು ಧೃಡವಾಗಿದೆ.ರಾತ್ರಿಯಿಡಿ ಹಲಸೂರು ಪೊಲೀಸ್ ಠಾಣೆಯಲ್ಲಿ ನಟ ಸಿದ್ದಾಂತ್‌ನ ಪೊಲೀಸ್ರು ವಿಚಾರಣೆ ನಡೆಸಿದ್ದು,ಪಾರ್ಟಿಗೆ ಡಿಜೆ ಯ ಜೊತೆ ಬಂದಿದ್ದ ನಟ ಸಿದ್ದಾಂತ್ ಒಪ್ಪಿಕೊಂಡಿದ್ದಾನೆ.
ಮುಂಬೈ ಮೂಲದ ಡಿಜೆಯಿಂದ ಪಾರ್ಟಿ ಗೆ ಡ್ರಗ್ ಸಪ್ಲೆ ಆಗಿರೋ ಬಗ್ಗೆ ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ. ಇನ್ನೂ ಬಾಲಿವುಡ್ ನಟನ ಜೊತೆಗೆ ಪ್ರಭಾವಿಗಳ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರು ದಾಳಿ ಮಾಡ್ತಾರೆ ಅನ್ನೋ ಮಾಹಿತಿ ಸಿಗ್ತಿದ್ದಂತೆ ಹೋಟೆಲ್ ನಿಂದ ಕೆಲವರು ಪರಾರಿಯಾಗಿದ್ದಾರೆ. ಹಲಸೂರು ಬಳಿಯ GT ಮಾಲ್ ಮುಂಭಾಗದಲ್ಲಿರುವ "ದಿ ಪಾರ್ಕ್" ಹೋಟೆಲ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಅನುಮಾನ ಹಿನ್ನೆಲೆ ಪೊಲೀಸ್ರು ದಾಳಿ ನಡೆಸಿದ್ರು.
ಸದ್ಯ ಐವರು ಡ್ರಗ್ ಪಡೆದಿರೋದು ಕನ್ಫರ್ಮ ಆಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.ರಾತ್ರಿ 12 ಘಂಟೆಯ ಸುಮಾರು 30 ಕ್ಕು ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದೆ.ಹಲಸೂರು ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿಯಲ್ಲಿ 50 ಕ್ಕೂ ಹೆಚ್ಚು ಯವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.
PublicNext
13/06/2022 11:09 am