ಕಲಬುರಗಿ : ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿಗ ಪೊಲೀಸ್ ಕಾನಸ್ಟೇಬಲ್ ಇಸ್ಮಾಯಿಲ್ ಜಮಾದಾರ್ ಎಂಬುವವರನ್ನು ಸಿಐಡಿ ಕಳೆದ ರಾತ್ರಿ ಬಂಧಿಸಿದೆ.
ಹೌದು ಇಸ್ಮಾಯಿಲ್ ಜಮಾದರ್ ಅಕ್ರಮವಾಗಿ ಪಿಎಸ್ ಐ ಪರೀಕ್ಷೆ ಬರೆದು ಪಾಸಾಗಿದ್ದ. ಕಿಂಗ್ಪಿನ್ ಆರ್.ಡಿ ಪಾಟೀಲ್ ನ ಸಹಾಯದಿಂದ ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷೆ ಬರೆದು ಪಾಸ್ ಆಗಿದ್ದ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಕಳೆದೊಂದು ತಿಂಗಳಿನಿಂದ ಇಸ್ಮಾಯಿಲ್ ತಲೆಮರೆಸಿಕೊಂಡಿದ್ದ.
ಈತನ ಹುಡುಕಾಟದಲ್ಲಿದ್ದ ಸಿಐಡಿ ಪೊಲೀಸರು ನಿನ್ನೆಯಷ್ಟೇ (ಶನಿವಾರ)ಇಸ್ಮಾಯಿಲ್ ಜಮಾದರ್ ಸಹೋದರ ಸೈಫನ್ ಜಮಾದರ್ ಮತ್ತು ಸ್ನೇಹಿತ ಮಹೇಶ್ ಹಿರೋಳ್ಳಿಯನ್ನ ಬಂಧಿಸಿದ್ದರು.ಇನ್ನು ಇಸ್ಮಾಯಿಲ್ ಜಮಾದರ್, ಸೈಫನ್ ಜಮಾದರ್, ಮಹೇಶ್ ಹಿರೋಳ್ಳಿ ಕಿಂಗ್ ಪಿನ್ ಆರ್ ಡಿ ಪಾಟೀಲ್ ನ ಪರಮಾಪ್ತರು. ಸದ್ಯ ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ.
PublicNext
12/06/2022 12:11 pm