ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.. ಅಫಜಲಪುರ ತಾಲ್ಲೂಕಿನ ಕರ್ಜಗಿ ಗ್ರಾಮದ ಮಹೇಶ್ ಹಿರೋಹಳ್ಳಿ ಮತ್ತು ಸೈಫನ್ ಜಮಾದಾರ್ ಎಂಬುವವರ ಬಂಧನವಾಗಿದೆ. ಸೈಫನ್ ಸಹೋದರ ಇಸ್ಮಾಯಿಲ್ ಖಾದರ್ ವಿರುದ್ದವೂ ದೂರು ದಾಖಲಾಗಿದೆ.
ಹೌದು ಇಸ್ಮಾಯಿಲ್ ಖಾದರ್ ಕೂಡಾ ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪಾಸ್ ಆಗಿದ್ದಾನೆ ಎನ್ನಲಾಗಿದೆ. ಅಕ್ರಮಕ್ಕೆ ಮಹೇಶ್ , ಸೈಫನ್ ಸೇರಿ ಹಲವರು ಸಾಥ್ ನೀಡಿದ್ದರು ಎನ್ನಲಾಗಿದೆ.
ಇನ್ನು ಪಿಎಸ್ ಐ ಇಸ್ಮಾಯಿಲ್ ಖಾದರ್ ಸೇರಿ ಐದು ಜನರ ವಿರುದ್ದ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ಈ ಕುರಿತು ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಗಮನಾರ್ಹ ಸಂಗತಿ ಎಂದರೆ ಮಹೇಶ್ ಮತ್ತು ಸೈಫನ್ ಇಬ್ಬರು ಆರ್ ಡಿ ಪಾಟೀಲ್ ಆಪ್ತರು ಎನ್ನಲಾಗಿದ್ದು, ಸದ್ಯ ಅಕ್ರಮದಲ್ಲಿ ಭಾಗಿಯಾಗಿ ತೆಲೆ ಕರೆಸಿಕೊಂಡ ಇಸ್ಮಾಯಿಲ್ ಖಾದರ್ ಸೇರಿ ಐವರಿಗಾಗಿ ಸಿಐಡಿ ಹುಡುಕಾಟ ಮುಂದುವರೆಸಿದೆ.
PublicNext
10/06/2022 08:13 am