ಬೆಂಗಳೂರು: ಪಿಎಸ್ ಐ ಸೆಲೆಕ್ಷನ್ ಲಿಸ್ಟ್ ನ ಫಸ್ಟ್ ರ‍್ಯಾಂಕ್ ಬಂದಿದ್ದ ಮಾಗಡಿ ಮೂಲದ ಕುಶಾಲ್ ರಾಜು ಅರೆಸ್ಟ್ ಆಗಿದ್ದಾನೆ.ಪಿಎಸ್ ಐ ಲಿಸ್ಟ್ ಅಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದವನೇ ಬಂಧನ ಆಗಿರೋದು ಆತಂಕಕಾರಿ ವಿಚಾರವಾಗಿದ್ದು, ಸಚಿವರೊಬ್ಬರ ಸಂಬಂಧಿಯಾಗಿರೊ ಕುಶಾಲ್ ಕುಮಾರ್ ಮೇಲೆ ಸಾಕಷ್ಟು ಅನುಮಾನ ಮೂಡಿದೆ.
ಕುಶಾಲ್ ಕುಮಾರ್ ಜೆ ಮಾಗಡಿಯ ಜುಟ್ಟನಹಳ್ಳಿ ಮೂಲದವನು. ಕುಶಾಲ್ ತಂದೆ ಸ್ಥಳೀಯ ರಾಜಕಾರಣಿಯಾಗಿದ್ದು ಜುಟ್ಟನಹಳ್ಳಿ ಜಯರಾಮಣ್ಣ ಎಂದು ಪರಿಚತರು. ಮೊನ್ನೆ ಅರೆಸ್ಟ್ ಆಗಿದ್ದು ಮಾಗಡಿ ಮೂಲದ ದರ್ಶನ್ ಗೌಡ ಹಾಗೂ ಇಬ್ಬರು ಸ್ನೇಹಿತರೆಂದು ತಿಳಿದು ಬಂದಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ ಸಿಐಡಿ ಪೊಲೀಸ್ರು ಕುಶಾಲ್ ನ ಬಂಧಿಸಿದ್ದಾರೆ. 545 ರಲ್ಲಿ 1 ನೇ ರ‍್ಯಾಂಕ್ ಪಡೆದಿದ್ದ ಕುಶಾಲ್ ಕುಮಾರ್, 200 ಅಂಕಗಳಿಗೆ 168 ಅಂಕ ಪಡೆದಿದು ಫಸ್ಟ್ ರ‍್ಯಾಂಕ್ ಕಪಡೆದಿದ್ದ.
PublicNext
09/06/2022 02:52 pm