ಚಲಿಸುತ್ತಿರುವ ರೈಲಿನಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತ ಯುವಕ, ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವುದು, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು ಹೀಗೆ ಸುಮಾರು ಹೊತ್ತು ಆಟವಾಡಿದ್ದಾನೆ.
ರೈಲು ವೇಗವಾಗಿರುತ್ತದೆ, ಮಾರ್ಗದ ಮಧ್ಯೆ ಸಾಕಷ್ಟು ಪ್ರಪಾತಗಳು ಇರುತ್ತವೆ. ಹೀಗಿದ್ದಾಗ ಅಪ್ಪಿ ತಪ್ಪಿ ಏನಾದರೂ ಕಾಲು ಜಾರಿ ಬಿದ್ದರೆ ಜೀವವೇ ಹೋಗುತ್ತದೆ. ಇದೆಲ್ಲ ಗೊತ್ತಿದ್ದರೂ ಯುವಕನ ಹುಚ್ಚಾಟ ಮಾತ್ರ ಜೋರಾಗಿತ್ತು. 'ಈ ರೀತಿ ಮಾಡಿದರೆ ಜೀವಕ್ಕೆ ಕುತ್ತಾಗುತ್ತದೆ. ಇವರಿಗೆ ಜೀವದ ಬೆಲೆಯೇ ಗೊತ್ತಿಲ್ಲ' ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
PublicNext
05/06/2022 04:16 pm