ತುಮಕೂರು: ಬಿಜೆಪಿ ಮುಖಂಡರೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ ಪ್ರಕರಣಕ್ಕೆ ಸಂಬಂಧ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್ ಗಳನ್ನು ಕೆಲಸದಿಂದ ಅಮಾನುತು ಮಾಡಲಾಗಿದೆ.ತುಮಕೂರು ಲೋಕೋಪಯೋಗಿ ವೃತ್ತದ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಮತ್ತು ಬೆಂಗಳೂರು ಕೆಆರ್ ವೃತ್ತದ ಲೋಕೋಪಯೋಗಿ ಇಲಾಖೆ ಪಿಆರ್ಎಎಂಸಿ ವಿಭಾಗದ ಇಂಜಿನಿಯರ್ ಎಂ. ಅಶ್ವಿನಿ ಅವರನ್ನು ಅಮಾನತು ಮಾಡಲಾಗಿದೆ.
ತುಮಕೂರು ಬಿಜೆಪಿ ಜಿಲ್ಲಾ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ್ ಅವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಶಂಭುಕುಮಾರ್, ಅಶ್ವಿನಿ ಮತ್ತು ಮತ್ತೊಬ್ಬ ಮಹಿಳೆ ಯತ್ನಿಸಿದ್ದರು ಎಂದು ಏಪ್ರಿಲ್ 12ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
PublicNext
04/06/2022 02:03 pm