ನವದೆಹಲಿ: ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿಯಾಗಲು 4 ಗಂಟೆಗಳ ಕಾಲ ಪೆರೋಲ್ ಮೇಲೆ ಹೊರ ಬಂದಿದ್ದ ದೆಹಲಿ ಹಿಂಸಾಚಾರದ ಆರೋಪಿ ಶಾರೂಖ್ ಪಠಾಣ್‌ಗೆ ಸ್ಥಳೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದ್ದು, ಶಾರೂಖ್ ಪಠಾಣ್, ಪೊಲೀಸರೊಂದಿಗೆ ಬರುತ್ತಿದ್ದಾಗ ಗುಂಪೊಂದು ಆತನ ಪರವಾಗಿ ಘೋಷಣೆ ಕೂಗಿರುವುದು ದಾಖಲಾಗಿದೆ. "ಮಾನವೀಯ ನೆಲೆಗಟ್ಟಿನಲ್ಲಿ ಅನಾರೋಗ್ಯಕ್ಕೊಳಗಾಗಿರುವ ಪೋಷಕರನ್ನು ಭೇಟಿ ಮಾಡುವುದಕ್ಕಷ್ಟೇ ಅವಕಾಶ ಮಾಡಿಕೊಡಲಾಗುತ್ತಿದೆ" ಎಂದು ಪೆರೋಲ್ ನೀಡುವಾಗ ಕೋರ್ಟ್ ಹೇಳಿತ್ತು, 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಶಾರೂಖ್ ಪಠಾಣ್ ಪ್ರಮುಖ ಆರೋಪಿಯಾಗಿದ್ದು, ಜಫ್ರಾಬಾದ್ ಪ್ರದೇಶದಲ್ಲಿ ಲೋಡ್ ಮಾಡಿದ ಪೊಲೀಸರತ್ತ ಪಿಸ್ತೂಲನ್ನು ತೋರಿಸಿದ್ದ. ಆತ ಅಕ್ರಮವಾಗಿ ತನ್ನಲ್ಲಿ ಇರಿಸಿಕೊಂಡಿದ್ದ 2 ಸುತ್ತು ಸಜೀವ ಗುಂಡುಗಳಿರುವ ಹಾಗೂ ಕೆಲವು ಗುಂಡುಗಳನ್ನು ಅದಾಗಲೇ ಹಾರಿಸಲಾಗಿದ್ದ 7.65 ಎಂಎಂ ಪಿಸ್ತೂಲ್ಅನ್ನು ಪೊಲೀಸರು ಶಾರೂಖ್ ಪಠಾಣ್‌ನಿಂದ ವಶಕ್ಕೆ ಪಡೆದಿದ್ದರು.
PublicNext
27/05/2022 06:41 pm