ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿನ್ನರ್ ಪಾರ್ಟಿ ನೆಪದಲ್ಲಿ ಐಸಿಸ್ ಸಂಘ ಸಂಘಟನೆಯಾಗ್ತಿತ್ತಾ? ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಸತ್ಯ

ಬೆಂಗಳೂರು: ರಾಜಧಾನಿಯ ಬೆಂಗಳೂರು ಐಸಿಸ್ ಗೆ ಯುವಕರ ಸಂಘಟನೆಯ ದೊಡ್ಡ ಹಬ್ ಆಗಿತ್ತು ಎನ್ನುವ ಸ್ಫೋಟಕ ಅಂಶ ಎನ್ ಐ ಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಐಸಿಸ್ ಗೆ ಯುವಕರ ನೇಮಕಾತಿ ಪ್ರಕರಣವಾಗಿ ಎನ್ ಐ ಎ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದು ಹಲವು ಸ್ಫೋಟಕ ವಿಷಯಗಳು ಬಹಿರಂಗವಾಗಿದೆ.

ಇದ್ರಲ್ಲಿ ಪ್ರಮುಖವಾಗಿ ಜೊಹೈಬ್ ಮನ್ನ ಹಾಗೂ ಅಬ್ದುಲ್ ಖಾದೀರ್ ಎಂಬುವರು ಸುಮಾರು 28 ಅನ್ಯಕೋಮಿನ ಯುವಕರನ್ನ ಇಸ್ಲಾಂಗೆ ಮತಾಂತರ ಮಾಡಿದ್ರು ಎನ್ನುವ ಅಂಶವು ಬೆಳಕಿಗೆ ಬಂದಿದೆ ಅಲ್ಲದೆ ಡಿನ್ನರ್ ಪಾರ್ಟಿ ನೆಪದಲ್ಲಿ ಕರೆದು ಯುವಕರಿಗೆ ಉಗ್ರವಾದದ ಭಾಷಣ ಮಾಡಿ ಐಸಿಸ್ ಸೇರಲು ಪ್ರೇರೆಪಿಸಲಾಗುತ್ತಿತ್ತು ಎನ್ನುವುದು ಬಹಿರಂಗವಾಗಿದೆ.

ಸಿರಿಯಾದಲ್ಲಿ ಕುಖ್ಯಾತ ಬಂಡುಕೋರ ಎಂದು ಗುರುತಿಸಿಕೊಂಡಿದ್ದ ಮಹಮ್ಮದ್ ಸಾಜೀದ್ ಬೆಂಗಳೂರಿನಲ್ಲಿ ಬಂದು ಭಾಷಣ ಮಾಡಿದ್ದರ ಬಗ್ಗೆ ಎನ್ ಐ ಎ ಬೆಳಕು ಚೆಲ್ಲಿದೆ.

ಸಾಜಿದ್ ಮೂರು ದಿನಗಳ ನಗರದಲ್ಲಿ ಉಳಿದುಕೊಂಡು ಯುವಕರಿಗೆ ಐಸಿಸ್ ಸೇರಲು ಪ್ರೇರೆಪಿಸಿದ್ದನಂತೆ. ಅಲ್ಲದೆ ಈತ ಮರಳಿ ಹೋಗುವಾಗ ಹಲವು ಯುವಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬೀಳ್ಕೊಟ್ಟಿದ್ದರು ಎಂದು ಎನ್ ಐ ಎ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದೆ.

Edited By : Nirmala Aralikatti
PublicNext

PublicNext

19/05/2022 09:32 pm

Cinque Terre

48.21 K

Cinque Terre

0

ಸಂಬಂಧಿತ ಸುದ್ದಿ