ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ನಡು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್‌ಗೆ ಆಟೋ ಚಾಲಕನಿಂದ ಕಪಾಳಮೋಕ್ಷ.!

ಬಳ್ಳಾರಿ: ಆಟೋ ಚಾಲಕನೋರ್ವ ನಡು ರಸ್ತೆ ಟ್ರಾಫಿಕ್ ಪೊಲೀಸ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ನಗರದ ದುರುಗಮ್ಮ ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡದ ಹಿನ್ನೆಲೆಯಲ್ಲಿ ಆಟೋವನ್ನು ಒಯ್ಯಲು ಟ್ರಾಫಿಕ್ ಪೊಲೀಸರು ಟೈಗರ್ ವಾಹನ ಬಳಸಲು ಮುಂದಾದಾಗಿದ್ದರು. ಈ ವೇಳೆ ಟ್ರಾಫಿಕ್ ಎಎಸ್‌ಐ ಗೋಪಾಲಕೃಷ್ಣನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ ಕಪ್ಪಗಲ್ ರಸ್ತೆ ನಿವಾಸಿ ರಾಮಕೃಷ್ಣ ಎಎಸ್‌ಐ ಗೋಪಾಲಕೃಷ್ಣ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಗೋಪಾಲಕೃಷ್ಣ ಗಾಯಗೊಂಡಿದ್ದು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಗೋಪಾಲಕೃಷ್ಣ ತಮ್ಮ ಮೇಲಾದ ಹಲ್ಲೆಗೆ ಸಂಬಂಧಿಸಿದಂತೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಆರೋಪಿ ಆಟೋ ಚಾಲಕ ರಾಮಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

Edited By : Manjunath H D
PublicNext

PublicNext

15/05/2022 10:08 pm

Cinque Terre

102.72 K

Cinque Terre

31

ಸಂಬಂಧಿತ ಸುದ್ದಿ