ಬೆಂಗಳೂರು:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಸಿಐಡಿ ವಿಶೇಷ ತಂಡ ಒಎಂಆರ್ ಶೀಟ್ ವರದಿಯನ್ನು ಎಫ್ಎಸ್ಎಲ್‌ನಿಂದ ಪಡೆದಿದೆ. ವರದಿಯಲ್ಲಿ ಒಟ್ಟು ನಾಲ್ಕು ಮಾದರಿ ಕಳ್ಳಾಟ ನಡೆದಿರುವುದು ಬೆಳಕಿಗೆ ಬಂದಿದೆ. ಕಾರ್ಬನ್ ಕಾಪಿ ಮತ್ತು ಅಸಲಿ ಒಎಂಆರ್ ನಡುವೆ ಅನೇಕ ವ್ಯತ್ಯಾಸಗಳು ಕಂಡು ಬಂದಿವೆ. ಅಂಕಗಳಲ್ಲೂ ಸಾಕಷ್ಟು ವ್ಯತ್ಯಾಸವಾಗಿರುವುದು ಪತ್ತೆಯಾಗಿದೆ. ಎರಡು ಪೇಪರ್‌ನನಲ್ಲಿ ಒಟ್ಟು ಅಂಕಗಳ ವ್ಯತ್ಯಾಸ ನೀಡಲಾಗಿದೆ. ಸುಮಾರು 92 ಕ್ಕೂ ಹೆಚ್ಚು ಪೇಪರ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕೆಲವು ಕಡೆ ಹೊರ ಬಂದ ಮೇಲೆ ಆಭ್ಯರ್ಥಿಗಳು ಓಎಂಆರ್ ಫಿಲ್ ಮಾಡಲಾಗಿದೆ. ಇದರಲ್ಲೂ ಬಳಕೆಯಾಗಿರುವ ಪೆನ್‌ಗಳು ಕೂಡ ಬೇರೆ ಬೇರೆಯಾಗಿದೆ. ಅಸಲಿ ಒಎಂಆರ್ ಶೀಟ್‌ನಲ್ಲಿ ಒಂದು ಮಾಡೆಲ್ ಪೆನ್ ನಿಬ್ ಬಳಕೆಯಾಗಿದ್ರೆ ಕಾರ್ಬನ್ ಶೀಟ್‌ನಲ್ಲಿ ಬೇರೆ ಪೆನ್ ನಿಬ್ ಬಳಸಿದ್ದು ಸ್ಪಷ್ಟವಾಗಿ ಗೊತ್ತಾಗಿದೆ. ಎಷ್ಟು ಪತ್ರಿಕೆಗಳಲ್ಲಿ ಈ ವ್ಯತ್ಯಾಸವಾಗಿದೆ ಎಂಬ ಮಾಹಿತಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ಸಿಐಡಿಗೆ ಕಳುಹಿಸಿದೆ. ಬಳಕೆಯಾದ ಪೆನ್ ಇಂಕ್ ಕಲರ್ ವ್ಯತ್ಯಾಸವನ್ನು ಎಫ್ಎಸ್ಎಲ್ ಪತ್ತೆ ಹಚ್ಚಿದೆ.
PublicNext
10/05/2022 06:41 pm