ಬೆಂಗಳೂರು: ಪಿಎಸ್‌ಐ ಅಕ್ರಮ ಪ್ರಕರಣ ಸಂಬಂಧ ಇಂದು ಸಿಐಡಿ ಡಿಜಿ ಮಂಕರನ್ ಸಿಂಗ್ ಸಂಧು ತನಿಖಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಎಸ್‌ಪಿ ರಾಘವೇಂದ್ರ, ಡಿವೈಎಸ್‌ಪಿ ಶೇಖರ್, ಡಿವೈಎಸ್‌ಪಿ ನರಸಿಂಹಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದು, ಇದುವರೆಗೂ ತನಿಖೆಯಲ್ಲಿ ಪತ್ತೆ ಯಾದ ಅಂಶಗಳನ್ನು ಡಿಜಿ ಸಂಧುಗೆ ವರದಿ ನೀಡಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಬಗೆಗೂ ಮಾಹಿತಿ ಕೇಳಿರುವ ಡಿಜಿ, ಗೃಹ ಇಲಾಖೆಯಿಂದ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಯಾರು ಶಾಮೀಲಾಗಿದ್ದಾರೋ ಅವರನ್ನ ಬಂಧಿಸುವಂತೆ ಡಿಜಿ ಸಂಧು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಪಿಎಸ್‌ಐ ಅಕ್ರಮದಲ್ಲಿರೋ ಪೊಲೀಸ್ ಅಧಿಕಾರಿಯೊಬ್ಬರಿಗೆ ನೋಟಿಸ್ ಕೊಡುವಂತೆ ಸೂಚಿಸಿದ್ದು, ಸಂಜೆಯ ಒಳಗಾಗಿ ನೋಟಿಸ್ ಕೊಟ್ಟು ಸ್ಪಷ್ಟನೆ ಕೊಡುವಂತೆ ಕೇಳಲು ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನು ಇದುವರೆಗೂ ಕ್ಯಾಂಡಿಡೇಟ್, ಬ್ರೋಕರ್‌ಗಳ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇನ್ನಾದರೂ ಕಿಂಗ್ ಪಿನ್‌ಗಳನ್ನ ಪತ್ತೆ ಮಾಡ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
PublicNext
10/05/2022 04:21 pm