ಬೊಮ್ಮನಹಳ್ಳಿ: ತಾನು ಪ್ರೀತಿಸಿದ ಯುವತಿ ಬೇರೊಬ್ಬನನ್ನ ಪ್ರೀತಿಸುತ್ತಿರುವುದನ್ನ ಸಹಿಸದೆ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಸಮರ್ಥ್ ನಾಯರ್ ಕೊಲೆಯಾದ ವ್ಯಕ್ತಿ. ಕಿರಣ್, ಅರುಣ್ ಹಾಗೂ ರಾಕೇಶ್ ಮೂವರು ಬಂಧಿತರು.
ಹಲವು ವರ್ಷಗಳಿಂದ ನಗರದಲ್ಲಿ ನೆಲೆಯೂರಿದ್ದ ಸಮರ್ಥ್, ಗಾರ್ಮೆಂಟ್ಸ್ ಕಂಪೆನಿಯೊಂದರಲ್ಲಿ ಕ್ವಾಲಿಟಿ ಚೆಕ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಕೆಲಸದ ನಿಮಿತ್ತ ಎರಡು ತಿಂಗಳು ದೆಹಲಿಯಲ್ಲಿದ್ದ. ಕಳೆದ ಏಪ್ರಿಲ್ 26 ರಂದು ಮತ್ತೆ ಬೆಂಗಳೂರಿಗೆ ಬಂದಿದ್ದ.
ಭದ್ರಾವತಿ ಮೂಲದ ಯುವತಿಯನ್ನು ಸಮರ್ಥ್ ಪ್ರೀತಿಸುತ್ತಿದ್ದ. ಸಮರ್ಥ್ ಪರಿಚಯವಾಗುವ ಮುನ್ನ ಆರೋಪಿ ಕಿರಣ್ ನನ್ನ ಆ ಯುವತಿ ಪ್ರೀತಿಸಿ ಬ್ರೇಕಪ್ ಕೂಡಾ ಮಾಡಿಕೊಂಡಿದ್ದಳು. ನಂತರ ಸಮರ್ಥ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಇದನ್ನು ಸಹಿಸದ ಕಿರಣ್ ಸಮರ್ಥ್ ನೊಂದಿಗೆ ಗಲಾಟೆ ಮಾಡಿದ್ದ. ಕಳೆದ ಶನಿವಾರ ಯುವತಿ ಜೊತೆಗಿದ್ದಾಗ ಕಿರಣ್ ಆಂಡ್ ಟೀಮ್ ಏಕಾಏಕಿ ಸಮರ್ಥ್ ತಲೆಗೆ ಕಾಲಿನಿಂದ ಒದ್ದು ಗೋಡೆಗೆ ತಲೆ ಹಿಡಿದು ಚಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮರ್ಥ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
10/05/2022 03:28 pm