ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಹಿಂಸಾಚಾರದಲ್ಲಿ ಪೊಲೀಸ್ ವೈಫಲ್ಯ: ಕೋರ್ಟ್ ಗರಂ

ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷ ವಿಚಾರವಾಗಿ ಸ್ಥಳೀಯ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ. ಗಲಭೆಗೂ ಮುನ್ನ ನಡೆದ ಕಾನೂನು ಬಾಹಿರ ಮೆರವಣಿಗೆಯನ್ನು ತಡೆದಿದ್ದರೆ ಈ ಸಂಘರ್ಷ ಉಂಟಾಗುತ್ತಿರಲಿಲ್ಲ. ಘಟನೆಯ ಸಂಪೂರ್ಣ ವಿಫಲತೆಯನ್ನು ಪೊಲೀಸ್ ಮುಖ್ಯಸ್ಥರು ತನಿಖೆ ನಡೆಸಬೇಕು ಹಾಗೂ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೋಮು ಘರ್ಷಣೆಯಲ್ಲಿ ಭಾಗಿಯಾದ ಎಂಟು ಜನ ಆರೋಪಿಗಳ ಜಾಮೀನನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳು ಸ್ಥಳೀಯ ಕ್ರಿಮಿನಲ್‌ಗಳಾಗಿದ್ದು, ಅವರು ಬಿಡುಗಡೆಯಾದರೆ ಸಾಕ್ಷಿಗಳನ್ನು ಬೆದರಿಸಬಹುದು ಎಂದು ಹೇಳಿದೆ. ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭ ವಾಯುವ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಪ್ಪತ್ತು ಜನರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆ ನಡೆದಿದ್ದು ಮಾತ್ರವಲ್ಲದೆ, ಪೊಲೀಸರ ಸಮ್ಮುಖದಲ್ಲಿಯೇ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಾಗ್ವಾದ ನಡೆಸಲಾಗಿತ್ತು.

ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭ ವಾಯುವ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಪ್ಪತ್ತು ಜನರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆ ನಡೆದಿದ್ದು ಮಾತ್ರವಲ್ಲದೆ, ಪೊಲೀಸರ ಸಮ್ಮುಖದಲ್ಲಿಯೇ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಾಗ್ವಾದ ನಡೆಸಲಾಗಿತ್ತು.

Edited By : Nagaraj Tulugeri
PublicNext

PublicNext

08/05/2022 06:12 pm

Cinque Terre

76.62 K

Cinque Terre

4

ಸಂಬಂಧಿತ ಸುದ್ದಿ