ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಸುಳ್ಳು ಹೇಳಿಲ್ಲ, ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ: ಕಮಲ್ ಪಂತ್

ಬೆಂಗಳೂರು: ನಾನು ಯಾವುದೇ ಸುಳ್ಳು ಹೇಳಿಲ್ಲ. ನನಗೆ ಲಭ್ಯವಾಗಿರುವ ಎಲ್ಲ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಹಾಗೂ ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಗಿ ಚಂದ್ರು ಕೊಲೆ ನಡೆದಿದೆ ಎಂದು ಕಮಿಷನರ್ ಕಮಲ್ ಪಂಥ್ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಕ್ಕೆ ನಗರದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮಲ್ ಪಂತ್, "ಜೆ.ಜೆ ನಗರ ಯುವಕ ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ" ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ರವಿಕುಮಾರ್ ಹೇಳಿದ್ದೇನು?

'ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜನ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು' ಎಂದು ರವಿಕುಮಾರ್ ದೂರಿದ್ದರು.

Edited By : Vijay Kumar
PublicNext

PublicNext

09/04/2022 06:00 pm

Cinque Terre

57.24 K

Cinque Terre

7

ಸಂಬಂಧಿತ ಸುದ್ದಿ