ಕೊತ್ವಾಲಿ: ಶಾಸಕರೊಬ್ಬರ ವಿರುದ್ಧ ವರದಿ ಮಾಡಿದರೆಂಬ ಕಾರಣಕ್ಕೆ ಪತ್ರಕರ್ತರನ್ನು ಠಾಣೆಗೆ ಕರೆತಂದು ಅರೆಬೆತ್ತಲು ಮಾಡಿದ ಫೋಟೊ ನಿನ್ನೆ ಗುರುವಾರ ಸಂಜೆಯಿಂದ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಉಪ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ ಎಂಟು ಮಂದಿ ಇದ್ದು, ಒಳ ಉಡುಪು ಮಾತ್ರ ಧರಿಸಿ ಅರೆಬೆತ್ತಲೆಯಾಗಿ ನಿಂತಿದ್ದಾರೆ. ಏಪ್ರಿಲ್ 2 ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
“ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಅವರ ಪುತ್ರ ಗುರುದತ್ ವಿರುದ್ಧ ಅಸಭ್ಯವಾಗಿ ಟೀಕಿಸಲಾಗಿದೆ ಎಂದು ಆರೋಪಿಸಿ ಬಂಧನಕ್ಕೊಳಕ್ಕಾಗಿರುವ ರಂಗಭೂಮಿ ಕಲಾವಿದ ನೀರಜ್ ಕುಂದರ್ ಕುರಿತು ವರದಿ ಮಾಡಲು ಹೋಗಿದ್ದೆ” ಎಂದು ಫೋಟೋದಲ್ಲಿ ಗುರುತಿಸಲ್ಪಟ್ಟಿರುವ ಸ್ಥಳೀಯ ಪತ್ರಕರ್ತ, ಯೂಟ್ಯೂಬರ್ ಕನಿಷ್ಕ್ ತಿವಾರಿ ಹೇಳಿರುವುದಾಗಿ ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ.
PublicNext
08/04/2022 11:28 am