ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಹಿಜಾಬ್ ವಿವಾದ ಭಾರಿ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಬಸ್ ಜಾರ್ಜ್ ಉಳಿಸ ಹಿಜಾಬ್ ಹಾಕಿಕೊಂಡು ಬಂದ ವ್ಯಕ್ತಿಯೋರ್ವ ಕಂಡಕ್ಟರ್ ಕೈಗೆ ಸಿಕ್ಕಿಬಿದ್ದಿದ್ದಾನೆ.
ಹೌದು. ದೆಹಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸಿದೆ. ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಯುವಕನೊಬ್ಬ ಹಿಜಾಬ್ ಧರಿಸಿ ಲೇಡೀಸ್ ಸೀಟ್ನಲ್ಲಿ ಬಂದು ಕುಳಿತಿದ್ದಾನೆ. ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಹುಡುಗಿಯರಂತೆ ವರ್ತಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಆತನ ನಡವಳಿಕೆ ನೋಡಿ ಕಂಡಕ್ಟರ್‌ಗೆ ಸಂದೇಹ ಬಂದಿದೆ. ಮಾಸ್ಕ್ ತೆಗೆಯಲು ಹೇಳಿದರೂ ಯುವಕ ಅದನ್ನು ಆರಂಭದಲ್ಲಿ ವಿರೋಧಿಸಿದ್ದಾನೆ. ನಂತರ ಕಂಡಕ್ಟರ್ ಬಲವಂತ ಮಾಡಿದಾಗ ನಿಜ ಬಣ್ಣ ಬಯಲಾಗಿದೆ.
ಹಿಜಾಬ್, ಮಾಸ್ಕ್ ತೆಗೆಸುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಕಂಡಕ್ಟರ್ ಮೇಲೆಯೇ ಹರಿಹಾಯ್ದಿದ್ದರು. ಹುಡುಗಿಯ ಬಳಿ ಇದೆಂಥ ದುರ್ವರ್ತನೆ ಎಂದುಕೊಂಡವರು ಕೆಲವರು. ಕೊನೆಗೆ ಅವರೂ ಬೆಚ್ಚಿಬಿದ್ದಿದ್ದಾರೆ.
PublicNext
24/03/2022 09:56 pm