ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ಇಡೀ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಗುಂಪು ಘರ್ಷಣೆಗಳು ಮತ್ತೆ ನಡೆಯದಿರಲು ಶಿವಮೊಗ್ಗ ಖಾಕಿ ಪಡೆ ಎಲ್ಲ ಕಡೆ ಟೈಟ್ ಮಾಡಿದೆ. ಆದರೂ ಕಿಡಿಗೇಡಿಗಳು ಬಾಲ ಬಿಚ್ಚಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನಗರದ ಎಲ್ಲೆಡೆ ಡ್ರೋಣ್ ಕ್ಯಾಮೆರಾಗಳನ್ನು ಹಾರಿ ಬಿಟ್ಟು ತೀವ್ರ ನಿಗಾ ವಹಿಸಿದ್ದಾರೆ. ಈ ಮೂಲಕ ಜನ ಸಂಚಾರದ ಪ್ರತಿಯೊಂದು ಚಲನವಲನಗಳ ಮೇಲೆ ಸದಾ ಕಣ್ಣಿಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸದ್ಯ 4 ಡ್ರೋಣ್ ಕ್ಯಾಮೆರಾಗಳನ್ನು ಜಿಲ್ಲಾಡಳಿತ ತರಿಸಿಕೊಂಡಿದೆ. 20 ನುರಿತ ಪೊಲೀಸರ ತಂಡದಿಂದ ನಗರ ಪ್ರದೇಶದಲ್ಲಿನ ದೃಶ್ಯಗಳನ್ನು ಸೆರೆ. ಹಿಡಿಯಲಾಗುತ್ತಿದೆ. 5 ಕಿ.ಮೀ. ರೇಡಿಯಸ್ ಹೊಂದಿರುವ ಈ ಡ್ರೋಣ್ ಕ್ಯಾಮೆರಾಗಳು 500 ಮೀ. ಎತ್ತರಕ್ಕೆ ಹಾರಲಿವೆ. 1,280 ಮೆಗಾ ಪಿಕ್ಸೆಲ್ ಸ್ಪಷ್ಟತೆಯನ್ನು ಈ ಕ್ಯಾಮೆರಾಗಳು ಹೊಂದಿವೆ. ಕಾರ್ಕಳದ ಎಎನ್‌ಎಫ್ ಹಾಗೂ ಸಿಎಸ್‌ಪಿ ವಿಭಾಗದ ತಲಾ ಎರಡು ಡ್ರೋಣ್‌ಗಳು ಈ ಕಾರ್ಯಾಚರಣೆಯಲ್ಲಿ ಹಾರಾಡುತ್ತಿವೆ. ಇದಕ್ಆಗಿ ಒಟ್ಟು ಐವರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
PublicNext
24/02/2022 02:47 pm