ಬೆಂಗಳೂರು: ಶಿವಮೊಗ್ಗ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಹಿನ್ನೆಲೆ ನೋಡಿದ್ರೆ ಶಾಕ್ ಆಗುತ್ತೆ. ಈ ಕೊಲೆಯ ಪ್ರಮುಖ ಆರೋಪಿಗಳ ಮೇಲಿದೆ ಸಾಲು ಸಾಲು ಕ್ರಿಮಿನಲ್ ಕೇಸ್ ಗಳು! ʼಕ್ರಿಮಿʼನಲ್ ಬ್ಯಾಕ್ ಗ್ರೌಂಡ್ ಹಿನ್ನೆಲೆ ಹೊಂದಿರೋ ಆರೋಪಿಗಳ ಹಿಸ್ಟರಿ ʼಪಬ್ಲಿಕ್ ನೆಕ್ಸ್ಟ್ʼ ನಲ್ಲಿ..
* ಆರೋಪಿ ಖಾಸಿಫ್: ಇವನ ಮೇಲಿದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 5 ಎಫ್ ಐಆರ್ ಗಳು., * 2012 ರಲ್ಲೇ ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 25 ( ಕ್ರಿಮಿನಲ್ ಇಂಟೆನ್ಷನ್ ) ಅಡಿಯಲ್ಲಿ ಕೇಸ್. * 2016ರಲ್ಲಿ 2 ಎಫ್ ಐಆರ್ ಆಗಿದ್ದು, ಐಪಿಸಿ 141 ( ಅಕ್ರಮವಾಗಿ ಗುಂಪುಗೂಡುವುದು), 341 504,506, 323( ಹಲ್ಲೆ), 399 402 ( ಡೌಟ್ ಡಕಾಯಿತಿ/ ಡಕಾಯಿತಿಗೆ ಯತ್ನ) ಅಡಿ ಎಫ್ ಐಆರ್. *2017 ರಲ್ಲಿ ಐಪಿಸಿ 395 ( ದರೋಡೆ ಕೇಸ್ ), 2017 ರಲ್ಲಿ ಐಪಿಸಿ 376( ಅತ್ಯಾಚಾರ ) 366ಎ ( ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ) ಕೇಸ್ ದಾಖಲು.
ಐಪಿಸಿ 506 - ಅಪರಾಧಿಕ ಭಯೋತ್ಪಾದನೆಗೆ ದಂಡನೆ, 143 - ಸಾರ್ವಜನಿಕರ ನೆಮ್ಮದಿ ಹಾಳು ಮಾಡುವುದು, 341 - ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ, 504 - ಶಾಂತಿಭಂಗ ಮಾಡಲು ಪ್ರಚೋದಿಸುವ ಉದ್ದೇಶದಿಂದ ಮಾಡುವ ಅಪಮಾನ, 323 - ಹಲ್ಲೆ ನಡೆಸುವುದು, 506 - ಅಪರಾಧಿಕ ಭಯೋತ್ಪಾದನೆಗೆ ದಂಡನೆ. 149 - ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು, 399 - ದರೋಡೆಗೆ ಸಿದ್ಧತೆ, 402 - ದರೋಡೆ, 395 - ದರೋಡೆ, 376 - ಅತ್ಯಾಚಾರ, 366 ಎ - ಅಪ್ರಾಪ್ತೆಯ ಮೇಲೆ ಬಲಾತ್ಕಾರ.
* ಆಸಿಫ್ ಖಾನ್ @ ಚಿಕ್ಕು ಮೇಲೆ ದೊಡ್ಡಪೇಟೆ ಠಾಣೆಯಲ್ಲಿ 4 ಎಫ್ ಐ ಆರ್ ದಾಖಲಾಗಿವೆ. *ರಿಹಾನ್ ಶರೀಫ್ @ ಖಾಸಿ ಮೇಲೆ 2021 ರಲ್ಲಿ 307 ಕೊಲೆ ಯತ್ನ ಪ್ರಕರಣದಲ್ಲಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಆಸಿಫ್ ಖಾನ್ A3: 143 - ಸಾರ್ವಜನಿಕರ ನೆಮ್ಮದಿ ಹಾಳು ಮಾಡುವುದು. 147 - ದೊಂಬಿ, ಗಲಾಟೆ. 148 - ಮಾರಕಾಸ್ತ್ರ ಬಳಕೆ, 323 - ಹಲ್ಲೆ ನಡೆಸುವುದು, 324 - ಮಾರಕಾಸ್ತ್ರಗಳಿಂದ ಭಯ ಹುಟ್ಟಿಸುವುದು, 504 - ಉದ್ದೇಶ ಪೂರ್ವಕ ಪ್ರಚೋದನೆ, 307 - ಕೊಲೆ ಯತ್ನ,
149 - ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು.
* ರಿಹಾನ್ ಶರೀಫ್ A4: 307 - ಕೊಲೆ ಯತ್ನ ಅಡಿಯಲ್ಲಿ ಕೇಸ್ ದಾಖಲಾಗಿವೆ.
PublicNext
23/02/2022 12:31 pm