ಶಿವಮೊಗ್ಗ: ನಗರದ ಹಿಂದೂ ಕಾರ್ಯರ್ಕತ ಹರ್ಷನ ಕೊಲೆ ಹಿನ್ನೆಲೆಯಲ್ಲಿಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಆಸ್ಪತ್ರೆಗೂ ಭೇಟಿ ಕೊಟ್ಟಿದ್ದಾರೆ. ಕಾರ್ಯಕರ್ತ ಹರ್ಷನ ಮನೆಯವರಿಗೂ ಸಾಂತ್ವನ ಹೇಳಿದ್ದಾರೆ.
ಕೊಲೆಯಾದ ಹರ್ಷನ ಪೋಷಕರ ಜೊತೆಗೆ ಮಾತನಾಡಿದ್ದೇನೆ. ಅವರಿಗೆ ಶಾಂತ್ವನ ಕೂಡ ಹೇಳಿದ್ದೇನೆ. ಹರ್ಷನ ಸಾವು ದುರಾದುಷ್ಟಕರ. ಕೊಲೆ ಮಾಡಿದವ್ರು ಯಾರೂ ಅನ್ನೋದು ಪತ್ತೆ ಆಗಿದೆ. ಪೊಲೀಸರು ಅವರನ್ನ ಬೆನ್ನಟ್ಟಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಆಕ್ರೋಶಕ್ಕೆ ತುತ್ತಾಗಿ ಕೆಲವಾರು ಬೈಕ್ ಸುಟ್ಟುದ್ದಾರೆ. ಜನ ಶಾಂತಿಯುತವಾಗಿಯೇ ಇರಬೇಕಿದೆ. ಇನ್ನು ಈಗಾಗಲೇ ಕೆ.ಎಸ್.ಆರ್.ಪಿ ಮತ್ತು ಆರ್.ಎ.ಎಫ್ ತುಕಡಿ ತರಿಸಲಾಗಿದೆ. ನಗರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
PublicNext
21/02/2022 12:42 pm