ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದುಗಳೇ ಮಸೀದಿ ಒಡೆಯಿರಿ : ಕಾಳಿ ಮಠದ ಋಷಿಕುಮಾರಸ್ವಾಮಿ ಅರೆಸ್ಟ್

ಮಂಡ್ಯ : ಮಸೀದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಳಿಮಠದ ಋಷಿಕುಮಾರಸ್ವಾಮಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರಿನ ಕಾಳಿ ಮಠದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಋಷಿಕುಮಾರ ಸ್ವಾಮೀಜಿ ಹಿಂದುಗಳೇ ಮಸೀದಿ ಒಡೆಯಿರಿ ಎನ್ನುವ ಪ್ರಚೋದನಕಾರಿ ಹೇಳಿಕೆ ನೀಡಿದಲ್ಲದೇ ಆ ಹೇಳಿಕೆಯನ್ನು ಫೇಸ್ ಬುಕ್ ಹಾಕುವ ಮೂಲಕ ಕೋಮುಗಲಭೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಹೌದು ಶ್ರೀರಂಗಪಟ್ಟಣದ ಮಸೀದಿ ಮುಂದೆ ವಿಡಿಯೋ ಮಾಡಿದ್ದ ಸ್ವಾಮೀಜಿ ಬಾಬರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಕೆಲ ದಿನಗಳ ಹಿಂದೆಯಷ್ಟೇ ಮಸೀದಿ ಒಡೆಯುತ್ತಾರೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿ ಬೆನ್ನಲ್ಲೇ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದ ಸ್ವಾಮೀಜಿ. ಈ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ. ಅದು ದೇವಸ್ಥಾನದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಾಸ್ಥಾನವನ್ನ ಮಸೀದಿ ಮಾಡಿಕೊಂಡಿದ್ದಾರೆ.ಹಿಂದೂಗಳು ಜಾಗರೂಕರಾಗಿ, ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ಪೋಸ್ಟ್ ಮಾಡಿದ್ದರು.

Edited By : Nirmala Aralikatti
PublicNext

PublicNext

18/01/2022 11:38 am

Cinque Terre

90.36 K

Cinque Terre

59