ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್‌ಇನ್ಸಪೆಕ್ಟರ್ ಹರೀಶ್ ವಿರುದ್ಧ ಈಗ ಮತ್ತೊಂದು ಸ್ಪೋಟಕ ವಿಷಯ ಹೊರ ಬಿದ್ದಿದೆ.ಮುಖ್ಯ ಪೊಲೀಸ್ ಕಾನ್ಸ್‌ಟೇಬಲ್ ಕಡೆಯಿಂದ ಪದೇ ಪದೇ ಅಬಾರ್ಷನ್ ಕಿಟ್ ಹಾಗೂ ಪ್ರೆಗ್ನೆನ್ಸಿ ಕಿಟ್ ತರೆಸಿಕೊಳ್ಳುತ್ತಿದ್ದರನ್ನೋ ವಿಷಯ ಈಗ ಬಹಿರಂಗ ಆಗಿದೆ.
ಸಬ್ಇನ್ಸ್ ಪೆಕ್ಟರ್ ಹರೀಶ್ ನೆರೆಮನೆಯವರ ಜಗಳಕ್ಕೆ ಸಂಬಂಧಿಸಿದಂತೆ ತೌಸೀಫ್ ಪಾಷಾ ಎಂಬಾತನನ್ನ ವಶಕ್ಕೆ ಪಡೆದು ಎಫ್ಐಆರ್ ದಾಖಲಿಸದೇನೆ ಮನಸೋ ಇಚ್ಚೆ ತಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲಿಯಲ್ಲಿ ಮೂತ್ರ ತುಂಬಿಕೊಟ್ಟಿದ್ದರು. ತೌಸೀಫ್ ಗಡ್ಡವನ್ನ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದರು.
ಇದೇ ವರ್ತನೆ ಹಿನ್ನೆಲೆಯಲ್ಲಿಯೇ ಮಾನವ ಹಕ್ಕು ಆಯೋಗದ ಕಾರ್ಯಕರ್ತರು ಟ್ವಿಟರ್ ಮೂಲಕ ಪಶ್ಚಿಮ ವಲಯದ ಡಿಸಿಪಿಗೆ ದೂರು ಸಲ್ಲಿಸಿದ್ದರು. ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯ ವಿಚಾರಣೆ ನಡೆಸಿ ಇಂದು ಡಿಸಿಪಿ ಸಂಜೀವ್ ಪಾಟೀಲರಿಗೆ ವರದಿ ಸಲ್ಲಿಸೋರಿದ್ದರು.
ಅಷ್ಟರಲ್ಲಿಯೇ ಈಗ ಸಬ್ ಇನ್‌ಸ್ಪೆಕ್ಟರ್ ಹರೀಶ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಪದೇ ಪದೇ ಮುಖ್ಯ ಪೊಲೀಸ್ ಕಾನ್ಸ್‌ಟೇಬಲ್ ಕಡೆಯಿಂದ ಅಬಾರ್ಷನ್ ಕಿಟ್ ಹಾಗೂ ಪ್ರೆಗ್ನೆನ್ಸಿ ಕಿಟ್ ಅನ್ನ ಹರೀಶ್ ತರಿಸಿಕೊಳ್ಳುತ್ತಿದ್ದರು ಅನ್ನೋ ಆಡಿಯೋ ವೈರಲ್ ಗಿದೆ.
PublicNext
06/12/2021 03:41 pm