ವಾಷಿಂಗ್ಟನ್: ಭಾರತಕ್ಕೆ ಭೇಟಿ ನೀಡಲು ವೀಸಾಗೆ ಅರ್ಜಿ ಸಲ್ಲಿಸಿದ್ದ ಮಹಿಳೆ ಮೇಲೆ ಅಧಿಕಾರಿಯೊಬ್ಬರು ಗರಂ ಆದ ಘಟನೆ ಅಮೆರಿಕಾದ ನ್ಯೂಯಾರ್ಕ್ ಕಾನ್ಸುಲೇಟ್‌ನಲ್ಲಿ ನಡೆದಿದೆ.
ಹೌದು. ಮಹಿಳೆಯೊಬ್ಬರು ನವೆಂಬರ್ 24ರಂದು ನ್ಯೂಯಾರ್ಕ್‌ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರ ಭಯಾನಕ ವರ್ತನೆಯನ್ನು ಎದುರಿಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ತಂದೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಯು ವೀಸಾ ಅರ್ಜಿ ವಿಚಾರಣೆ ವೇಳೆ ತನ್ನ ತಾಳ್ಮೆಯನ್ನು ಕಳೆದುಕೊಂಡರು ಮತ್ತು ಕೋಪದಿಂದ ಮಹಿಳೆಯ ವೀಸಾ ಅರ್ಜಿ, ಶುಲ್ಕವನ್ನು ಹಿಂದಿರುಗಿಸಿದ್ದಾರೆ. "ನೀವು ಹೀಗೆ ಮಾಡುವುದು ಸರಿಯಲ್ಲ" ಎಂದು ಮಹಿಳೆ ಕೇಳಿಕೊಂಡರೂ ಅಧಿಕಾರಿ ಕ್ಯಾರೆ ಎನ್ನದೆ ಅಲ್ಲಿಂದ ಮರೆಯಾದರು. ಅಧಿಕಾರಿಯ ಈ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.
PublicNext
02/12/2021 10:27 pm