ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಸರಣಿ ಕಳ್ಳರ ದಸ್ತಗಿರಿ,ಕಳವು ಸ್ವತ್ತು ಮಾಲಿಕರಿಗೆ ಮುಟ್ಟಿಸಿದ ಪೊಲೀಸರು

ನೆಲಮಂಗಲ: ಕಳೆದ ಮೂರು ತಿಂಗಳುಗಳಿಂದ ಹಲವು ಕಳ್ಳತನ ಪ್ರಕರಣಗಳನ್ನ ಭೇದಿಸಿ, ಸುಮಾರು 15 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಳವು ಮಾಡಿದ್ದ ಸುಮಾರು 95 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್, ವಾಹನಗಳನ್ನ ವಶ ಪಡಿಸಿಕೊಳ್ಳುವ ಮೂಲಕ ಬೆಂ.ಗ್ರಾ.ಜಿಲ್ಲೆ ನೆಲಮಂಗಲ ಉಪವಿಭಾಗ ವ್ಯಾಪ್ತಿಯ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನೂ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸರಗಳ್ಳರು ಸೇರಿದಂತೆ ಸುಮಾರು 11 ಮಂದಿ ಆರೋಪಿಗಳನ್ನ ಬಂಧಿಸಿದ್ದು, 150 ಗ್ರಾಂ ಚಿನ್ನದ ಸರಗಳು, ಬರೋಬ್ಬರಿ 855 ಕ್ಕೂ ಹೆಚ್ಚು ಮೊಬೈಲ್ ಫೋನ್, 5 ದ್ವಿಚಕ್ರವಾಹನ,2 ಲಗೇಜ್ ಆಟೋ ವಶಕ್ಕೆ ಪಡೆದಿದ್ದು, ಒಟ್ಟಾರೆ 80 ಲಕ್ಷ ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಂಡು ಭರ್ಜರಿ ಕಾರ್ಯಾಚರಣೆ ನಡೆಸಿದ್ರೆ, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನದ ಇಬ್ಬರು ಮನೆಗಳ್ಳರು, ಇಬ್ಬರು ದ್ವಿಚಕ್ರವಾಹನ ಆರೋಪಿಗಳನ್ನ ಬಂಧಿಸಿದ್ದು, 273 ಗ್ರಾಂ ಚಿನ್ನದ ಒಡವೆ, 141 ಕೆ.ಜಿ ತೂಕದ ಬೆಳ್ಳಿ ಸಾಮಾನು, 25 ಸಾವಿರ ನಗದು ಹಣ, 6 ದ್ವಿಚಕ್ರವಾಹನಗಳು ಸೇರಿ ಒಟ್ಟು 15 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಇದೇ ವೇಳೆ ಕಳೆದ ಮೂರು ತಿಂಗಳುಗಳ ಹಲವು ಕಳವು ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಮೊಬೈಲ್ ಗಳು ವಾಹನಗಳು ಮತ್ತು ನಗದು ಕಳೆದುಕೊಂಡ ಸಂಬಂಧಪಟ್ಟ ವಾರಸುದಾರರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮತ್ತು ಎಸ್ಪಿ ಕೋನವಂಶಿಕೃಷ್ಣ ಮರಳಿಸಿದರು. ಇನ್ನು ನೆಲಮಂಗಲ ಉಪವಿಭಾಗದ ಪೊಲೀಸ್ರ ಕಾರ್ಯಾಚರಣೆಗೆ ಸಾರ್ವಜನಿಕರು

ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

25/11/2021 07:55 pm

Cinque Terre

53.5 K

Cinque Terre

1

ಸಂಬಂಧಿತ ಸುದ್ದಿ