ದುಬೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿತ್ಯ ಹತ್ತಾರು ಕಟುಂಬಗಳು ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರುವುದನ್ನು ನಾವು ನೀವೆಲ್ಲಾ ಕಂಡಿದ್ದೇವೆ. ಸದ್ಯ ಇಲ್ಲೊಂದು ಕೇಸ್ ನಲ್ಲಿ ಪತಿರಾಯ ಮೇಕಪ್ ಇಲ್ಲದ ಪತ್ನಿ ಮುಖ ನೋಡಲಾಗ್ತಿಲ್ಲ ನನಗೆ ಅವಳಿಂದ ವಿಚ್ಛೇದನ ನೀಡಿ ಎಂದು ಈಜಿಪ್ಟಿಯನ್ ವ್ಯಕ್ತಿಯೊಬ್ಬ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾನೆ.
34 ವಯಸ್ಸಿನ ವ್ಯಕ್ತಿ ತನ್ನ 28 ವಯಸ್ಸಿನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಪತಿಯ ವಿಚ್ಛೇದನ ನಿರ್ಧಾರದಿಂದ ಆಘಾತಗೊಂಡಿರುವ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ.ಮದುವೆಗೂ ಮುನ್ನ ನನ್ನ ಪತ್ನಿ ತುಂಬಾ ಮೇಕಪ್ ಬಳಸುತ್ತಿದ್ದಳು. ಮೇಕಪ್ ರಹಿತವಾಗಿ ಆಕೆಯ ಮುಖವನ್ನು ನೋಡಲು ಬೇಸರವಾಗುತ್ತೆ. ಮೇಕಪ್ ಇಲ್ಲದೇ ಆಕೆ ಚೆನ್ನಾಗಿ ಕಾಣುವುದಿಲ್ಲ ಎಂದು ಪತಿ ದೂರಿದ್ದಾರೆ. ಅಲ್ಲದೇ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಫೇಸ್ ಬುಕ್ ನಲ್ಲಿ ಮೇಕಪ್ ನಲ್ಲಿರುವ ಸುಂದರ ಫೋಟೊಗಳನ್ನು ನೋಡಿ ಆತ ಅವಳನ್ನು ಮದುವೆಯಾಗಿದ್ದಾನೆ. ಆದರೆ ಈಗಾ ಅವಳು ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ವಿವಾಹದ ನಂತರ ಮೇಕಪ್ ಇಲ್ಲದೇ ಆಕೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ತಿಳಿಸಿದ್ದಾರೆ.
PublicNext
06/11/2021 05:57 pm