ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಕೃತಿಕ ಎಂಬ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ ಘಟನೆ ಬಾಗಲಕೋಟೆ ನವನಗರದ 61ನೇ ಸೆಕ್ಟರ್ ನಲ್ಲಿ ನಡೆದಿತ್ತು.ಸದ್ಯ ಅಪಹರಣಕಾರರೇ ಮಗಳನ್ನು ವಾಪಸ್ ಮನೆಗೆ ಬಿಟ್ಟು ಹೋಗಿದ್ದಾರೆ. ಇನ್ನು ಪೊಲೀಸರು ಈ ಕೇಸ್ ನ್ನು ಕೈಗೆತ್ತಿಕೊಂಡು ಕಾರ್ಯಪ್ರವೃತ್ತರಾದ 16 ಗಂಟೆಗಳ ಬಳಿಕ ಮನೆಗೆ ಬಾಲಕಿ ವಾಪಸಾಗಿದ್ದಾಳೆ.
ಕಿಡ್ನ್ಯಾಪರ್ಸ್ ಕಾರಿನಲ್ಲಿ ಬಂದು ಬಾಲಕಿಯನ್ನ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಬಾಲಕಿ ಮನೆಗೆ ಬರುತ್ತಿದ್ದಂತೆ ಬಾಲಕಿಯನ್ನು ಎತ್ತಿ ಮುದ್ದಾಡಿದ ಪೋಷಕರು ಫುಲ್ ಖುಷ್ ಆಗಿದ್ದಾರೆ.ಸದ್ಯ ಮನೆಗೆ ಸೇಫ್ ಆಗಿ ಬಂದ ಬಾಲಕಿ, ಕಾರಿನಲ್ಲಿ ನಾಲ್ಕು ಜನ ಬಂದಿದ್ರು, ಒಂದಿಷ್ಟು ಜನ ಹಿಂದಿ ಮಾತಾನಾಡ್ತಿದ್ರು, ಕನ್ನಡನೂ ಮಾತಾಡ್ತಿದ್ರು. ನನ್ನನ್ನ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ರು. ರಾತ್ರಿ ಕುಡಿಯೋಕೆ ಜ್ಯೂಸ್ ಕೊಟ್ಟಿದ್ರು ಎಂದು ಮಾಹಿತಿ ನೀಡಿದ್ದಾಳೆ.
PublicNext
28/10/2021 02:11 pm