ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಸಂಬಂಧಿಸಿದ ಡ್ರಗ್ಸ್ ಕೇಸ್ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕುಟುಂಬಕ್ಕೆ ಬೆದರಿಕೆ ಶುರುವಾಗಿದೆಯಂತೆ. ಈ ಸಂಬಂಧ ಸಮೀರ್ ವಾಂಖೆಡೆ ಅವರು ಮುಂಬೈನ ಸೆಷನ್ಸ್ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಅವರಿಂದ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಮತ್ತು ಅದರ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಸ್ಪಷ್ಟನೆ ನೀಡಿದ್ದಾರೆ.
ಆರ್ಯನ್ ಖಾನ್ ವಿರುದ್ಧದ ಕೇಸ್ನಲ್ಲಿ ನನ್ನ ಮೇಲೆ ಆಪಾಧನೆ ಬಂದಿದೆ. ನಾನು ಯಾವುದೇ ತನಿಖೆಗೆ ಸಿದ್ಧ. ಆದರೆ ಪ್ರಕರಣದ ಹಾದಿ ತಪ್ಪಿಸಲು ತನಿಖೆಗೆ ಒಳಗಾಗಿರುವ ಆರೋಪಿಗಳು ತಮ್ಮ ಪ್ರಭಾವವನ್ನ ಬಳಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಸಮೀರ್ ಕೋರ್ಟ್ಗೆ ದೂರಿದ್ದಾರೆ.
ನನಗೆ ಎಷ್ಟರ ಮಟ್ಟಿಗೆ ಬೆದರಿಕೆ ಇದೆ ಅಂದರೆ ನನ್ನ ತಾಯಿ, ನನ್ನ ಸಹೋದರಿ ಹಾಗೂ ನನ್ನ ಕುಟುಂಬವನ್ನ ಟಾರ್ಗೆಟ್ ಮಾಡಲಾಗಿದೆ. ನನ್ನ ಮೇಲೆ ಬಂದಿರುವ ಆರೋಪದ ತನಿಖೆಗೆ ನಾನು ಸಿದ್ಧ. ಯಾವುದೇ ತನಿಖೆಗೂ ನಾನು ಸಿದ್ಧ. ಆದರೆ ನನ್ನ ಕುಟುಂಬವನ್ನ ಟಾರ್ಗೆಟ್ ಮಾಡಿರೋದು ಸರಿಯಲ್ಲ ಎಂದು ಕೋರ್ಟ್ಗೆ ಸಮೀರ್ ವಾಂಖೆಡೆ ಕೋರ್ಟ್ಗೆ ತಿಳಿಸಿದ್ದಾರೆ.
ಆಯುಕ್ತರಿಗೆ ಪತ್ರ: ಈ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಆರೋಪಿಯನ್ನಾಗಿ ಮಾಡುವ ಸಾಧ್ಯತೆ ಇದೆ, ಹೀಗಾಗಿ ಸಂಭಾವ್ಯ ಕಾನೂನು ಕ್ರಮಗಳಿಂದ ತಮಗೆ ರಕ್ಷಣೆ ನೀಡಬೇಕು ಎಂದು ಕೋರಿ ಸಮೀರ್ ವಾಂಖೆಡೆ ಅವರು ಭಾನುವಾರ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಅವರಿಗೆ ಪತ್ರ ಬರೆದಿದ್ದರು.
PublicNext
25/10/2021 03:14 pm