ಹಾಸನ : ಯೂನಿಫಾರಂ ನಲ್ಲಿರುವಾಗ ಹಾಸನ ಪೊಲೀಸರು ಭರ್ಜರಿಯಾಗಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಹಾಸನದ ಪೆನ್ಸನ್ ಮೊಹಲ್ಲಾ ಠಾಣೆಯ ಎಎಸ್ ಐ ರಂಗಸ್ವಾಮಿ, ಹೆಡ್ ಕಾನ್ಸ್ ಟೇಬಲ್ ರಾಮೇಗೌಡರಿಂದ ಮದ್ಯಪಾನ ಜೋರಾಗಿರುವುದು ವಿಡಿಯೋದಲ್ಲಿ ಕಾಣಬಹದು.
ಬಾರ್ ನ ಹಿಂಭಾಗದಲ್ಲಿ ಎಣ್ಣೆ ಹೊಡೆಯುತ್ತಿರುವಾಗ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ಇನ್ನು ಪೊಲೀಸ್ ಯೂನಿಫಾರಂನಲ್ಲಿಯೇ ಎಣ್ಣೆ ಹೊಡೆಯೋದು ಎಷ್ಟು ಸರಿ ಎಂದು ಪ್ರಶ್ನೆಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ಜನರಿಗೆ ಹಿಡಿದು ಪ್ರಶ್ನೆ ಮಾಡ್ತಾರೆ ಆದ್ರೆ ನೀವು ಹೀಗೆ ಮಾಡೋದಾ ನಿಮ್ಮ ಹೆಸರೇನು.. ನಿಮ್ಮ ಹೆಸರೇನು ಎಂದು ಪ್ರಶ್ನೆ ಮಾಡುತ್ತಿದ್ದಂತೆ ಏನೋ ತಪ್ಪು ಆಗಿದೆ ಬಿಡಪ್ಪ ಎಂದು ಪೊಲೀಸರು ಸಮಜಾಯಿಷಿ ಕೊಟ್ಟಿದ್ದಾರೆ.
ಸದ್ಯ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ ಆರ್ ಎಸ್ ಪಕ್ಷ ಒತ್ತಾಯಿಸಿದೆ.
PublicNext
19/10/2021 06:41 pm