ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯಾಚಾರದ ದೂರು ದಾಖಲಿಸಿಕೊಳ್ಳದ ಪೊಲೀಸ್ ಠಾಣೆಗಳು

ಮುಂಬೈ: ಅಪ್ರಾಪ್ತೆಯೊಬ್ಬಳ ಮೇಲೆ ರೇಪ್ ನಡೆದಿರುವ ವಿಚಾರ ಇಂದು ಬೆಳಕಿಗೆ ಬಂದಿದೆ. ಇಂದು ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ದುರ್ಘಟನೆ ನಡೆದಿದ್ದು, 15ವರ್ಷದ ಬಾಲಕಿ ಸಂತ್ರಸ್ತೆ. ಉಲ್ಲಾಸನಗರದ ರೈಲ್ವೆ ಸ್ಟೇಶನ್ ಆವರಣದಲ್ಲಿರುವ ರೈಲ್ವೆ ವಸತಿ ಗೃಹದಲ್ಲಿ 15ವರ್ಷದ ಬಾಲಕಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆರೋಪಿಯನ್ನೂ ಬಂಧಿಸಲಾಗಿದ್ದು, ಪೊಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಾಲಕಿ ಶಿರಡಿಯಿಂದ ವಾಪಸ್ ಬರುತ್ತಿದ್ದಳು. ಭಿವಂದಿ ಬೈಪಾಸ್ ಬಳಿ ರೈಲಿನಿಂದ ಇಳಿದುಕೊಂಡಳು. ನಂತರ ಕಲ್ಯಾಣ್ ಗೆ ತೆರಳಿ ಉಲ್ಲಾಸನಗರಕ್ಕೆ ಹೋಗುವ ಲೋಕಲ್ ರೈಲನ್ನು ಹತ್ತಿದ್ದಳು. ಉಲ್ಲಾಸನಗರದಲ್ಲಿ ರಾತ್ರಿ 9ಗಂಟೆಗೆ ಅವಳು ಇಳಿದಾಗ ವ್ಯಕ್ತಿ ಒಬ್ಬ ಈಕೆಯನ್ನು ಅಪಹರಿಸಿ, ರೇಪ್ ಮಾಡಿದ್ದಾನೆಂದು ರೈಲ್ವೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಬಾಲಕಿ ರಾತ್ರಿಯಿಡೀ ಸಂಕಷ್ಟಪಟ್ಟು, ಬೆಳಗ್ಗೆ ಅಲ್ಲಿಂದ ಪಾರಾಗಿ ತನ್ನ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿ, ಆ ಸ್ನೇಹಿತೆ ನಮಗೆ ತಿಳಿಸಿದಳು ಎಂದು ಕಮಿಷನರ್ ಮಾಹಿತಿ ನೀಡಿದರು. ಬಾಲಕಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎರಡು ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಈ ಕ್ರೈಂ ನಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪ್ರಕರಣ ದಾಖಲಿಸಿಕೊಂಡಿಲ್ಲ.ಈ ಬಗ್ಗೆ ತನಿಖೆ ನಡೆಸುತ್ತೇವೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಕೌನ್ಸಲಿಂಗ್ ಗೆ ಕರೆದೊಯ್ಯಲಾಗುತ್ತದೆ ಎಂದು ಕಮಿಷನರ್ ಖಾಲಿದ್ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

12/09/2021 10:48 pm

Cinque Terre

88.01 K

Cinque Terre

6

ಸಂಬಂಧಿತ ಸುದ್ದಿ