ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಚಂದನವನ ಡ್ರಗ್ಸ್ ಕೇಸ್: ಪ್ರಕರಣದಲ್ಲಿ ಯಾರೆ ಆಗಲಿ, ಎಷ್ಟೇ ಪ್ರಭಾವಿಗಳಾಗಲಿ, ಅವರ ಮೇಲೆ ಕಠಿಣ ಕಾನೂನು ಕ್ರಮ: ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ: ಡ್ರಗ್ಸ್ ಪ್ರಕಣದಲ್ಲಿ ಎಫ್ ಎಸ್ ಎಲ್ ವರದಿ ಬಂದಿದೆ. ಕಾನೂನು ಅದರ ದಾರಿಯನ್ನು ಕಂಡುಕೊಂಡು ತನಿಖೆಯನ್ನು ಮುಂದುವರಿಸಿದೆ.ಆರೋಪಿ ಆ್ಯಂಕರ್ ಅನುಶ್ರೀ ಹೆಸರು ಬಾಯಿ ಬಿಟ್ಟಿರುವ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರಗ್ಸ್ ಕೇಸ್ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೈಬಿಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಈ ಕುರಿತು ನಾನು ಕೇಳಿ ಹೇಳುತ್ತೇನೆ. ಯಾವ ರಾಜಕೀಯ ಯಾರು ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್ ನಂತಹ ಪ್ರಕರಣಗಳಲ್ಲಿ ಯಾರು ಒತ್ತಡ ಮಾಡುವುದಿಲ್ಲ ಎಂದು ಸಚಿವ ತಿಳಿಸಿದರು.

ಡ್ರಗ್ಸ್ ಕೇಸ್ ನಲ್ಲಿ ಬಹಳ ಕಠಿಣ ಕ್ರಮವನ್ನ ನಮ್ಮ ಸರ್ಕಾರ ಕೈಗೊಂಡಿದೆ. ಇದರಲ್ಲಿ ಭಾಗಿಯಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಹೇಳಿದರು.

ಡ್ರಗ್ಸ್ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರು ಅವರ ವಿರುದ್ಧ ಕ್ರಮ ಖಂಡಿತ ಜರುಗಿಸಲಾಗುವುದು. ಇದರಲ್ಲಿ ಪೊಲೀಸರ ಮೇಲೆ ಒತ್ತಡ ಇರುವುದು ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.

ಬುಧವಾರ ನಗರದ ಕಂಗ್ರಾಳಿಯ ಕೆಎಸ್ ಆರ್ ಪಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು,

ಸಮಾಜದ ಸುವ್ಯವಸ್ಥೆ ಮತ್ತು ಶಾಂತಿಯನ್ನು ಭಂಗ ಮಾಡುವ ದೃಷ್ಟರಿಂದ ದೇಶದ ನಾಗರಿಕರನ್ನು ಕ ಕಾಪಾಡುವ ಕೆಲಸ ನಮ್ಮ ಪೊಲೀಸರದಾಗಿದೆ. ನಮ್ಮ ದೇಶದ ಗಡಿಯಲ್ಲಿ ಸೈನಿಕರು ಮಾಡುವ ಕೆಲಸವನ್ನು ಇಲ್ಲಿ ದೇಶದ ಒಳಗಿನ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುವ ಇವರು ಸೈನಿಕರು ಎಂದು ಇಲಾಖೆ ಪೊಲೀಸರಿಗೆ ಶುಭ ಹಾರೈಸಿ ಹುರಿದುಂಬಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತ್ನಾಡಿದ ಸಚಿವರು ಬೆಳಗಾವಿ ಯಮಕನಮರಡಿ ಪೊಲೀಸ್ ಠಾಣೆಯ ಆವರಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ತನಿಖೆಯಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದೆ. ಇದರಲ್ಲಿ ಎಷ್ಟೇ ಉನ್ನತ ಪೊಲೀಸ್ ಅಧಿಕಾರಿಗಳಿದ್ದರೂ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬೆಳಗಾವಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ಮೇಲೆ ಕ್ರಮ ಜರುಗಿಸಲಾಗುವುದು. ಸದ್ಯ ಪ್ರಕರಣ ತನಿಖಾ‌ ಹಂತದಲ್ಲಿ ಇದ್ದು ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡಲ್ಲ ಎಂದರು.

ಕಳೆದ 5 ವರ್ಷದ ಹಿಂದೆ ಸುಮಾರು 30 ಸಾವಿರಕ್ಕೂ ಅಧಿಕ ಪೊಲೀಸ್ ಹುದ್ದೆಗಳು ಖಾಲಿ ಇದ್ದವು. ಅವುಗಳನ್ನು ಭರ್ತಿ ಮಾಡುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ. ಯಡಿಯೂರಪ್ಪ ಸರಕಾರದಲ್ಲಿ ಸಾಕಷ್ಟು ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸದ್ಯ 16 ಸಾವಿರ ಹುದ್ದೆ ಖಾಲಿ ಇದ್ದು, ಈ ಪೈಕಿ ನಾಲ್ಕು ಸಾವಿರ ಹುದ್ದೆಯನ್ನು ಭರ್ತಿ ಮಾಡಲಾಗುತಿದೆ. ಈ ವರ್ಷದ ಕೊನೆಯಲ್ಲಿ ಎಸ್ ಐ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದರು.

Edited By : Manjunath H D
PublicNext

PublicNext

08/09/2021 01:35 pm

Cinque Terre

74.67 K

Cinque Terre

4

ಸಂಬಂಧಿತ ಸುದ್ದಿ