ಮುಂಬೈ: ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಕಾಂಡೋಮ್ ಪತ್ತೆಯಾದ ಕೂಡಲೇ ಅದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ಹೇಳಲಾಗುವುದಿಲ್ಲ ಎಂದು ಮುಂಬೈ ಅಡಿಷನಲ್ ಸೆಷನ್ಸ್ ಕೋರ್ಟ್ನ ಜಡ್ಜ್ ಸಂಜಾಶ್ರೀ ಜೆ ಘಾರಾಟ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವಾಯುಸೇನೆ ಅಧಿಕಾರಿ ಅತ್ಯಾಚಾರ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ಕೋರ್ಟ್ ಹೀಗೆ ಹೇಳಿದೆ. ಮೂರು ತಿಂಗಳ ಹಿಂದೆ ಮೇ 17ನೇ ತಾರೀಕಿನಂದು ಭಾರತೀಯ ನೌಕಾಪಡೆ ಸಿಬ್ಬಂದಿಯ ಪತ್ನಿ ಮೇಲೆ ವಾಯುಸೇನೆಯ ಅಧಿಕಾರಿ ಅತ್ಯಾಚಾರ ಎಸಗಿದ್ದ ಎಂದು ವರದಿಯಾಗಿತ್ತು.
ಹೆಡ್ ಮಸಾಜ್ ಮಾಡುವ ನೆಪದಲ್ಲಿ ಆರೋಪಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ನೌಕಾ ಪೊಲೀಸರಿಗೆ ದೂರಿದ್ದರು. ದೂರು ದಾಖಲಿಸಿಕೊಂಡ ಕಫ್ ಪೆರೇಡ್ ಪೊಲೀಸ್ ಆರೋಪಿಯನ್ನು ಬಂಧಿಸಿದ್ದರು.
ಈ ಸಂಬಂಧ ವಾಯುಸೇನೆ ಅಧಿಕಾರಿ ಈಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ಇದೊಂದು ಒಪ್ಪಿತ ಸೆಕ್ಸ್ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ರೂಮಿನಲ್ಲಿ ಕಾಂಡೋಮ್ ಸಿಕ್ಕಿದ್ದು ಎಂದಿದ್ದಾರೆ. ಆಗ ಕ್ರೈಮ್ ಸ್ಟಾಟ್ನಲ್ಲಿ ಕಾಂಡೋಮ್ ಪತ್ತೆಯಾದ ಮಾತ್ರ ಒಪ್ಪಿತ ಸೆಕ್ಸ್ ಎಂದು ಹೇಳಲಾಗುವುದಿಲ್ಲ ಎಂದಿರುವ ಕೋರ್ಟ್ ಆರೋಪಿಗೆ ಬೇಲ್ ನೀಡಿದೆ.
PublicNext
01/09/2021 10:09 pm