ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರ ಲಂಚದಾಹಕ್ಕೆ ಯುವಕ ಆತ್ಮಹತ್ಯೆ : ಪೊಲೀಸ್ ಕಾನ್ಸ್ಟೇಬಲ್, ಎಸ್ ಐ ಸಸ್ಪೆಂಡ್’

ಗೋದಾವರಿ : ಲಂಚದ ವಿಷಯದಲ್ಲಿ ಕೆಲವೊಂದು ಬಾರಿ ಆರಕ್ಷಕರು ಭಕ್ಷಕರಾಗಿಬಿಡುತ್ತಾರೆ. ಇವರ ಹಣ ದಾಹಕ್ಕೆ ಒಂದು ಜೀವದ ಉಸಿರು ನಿಂತು ಹೋಗಿರುವುದು ನಿಜಕ್ಕೂ ಶಾಕ್ ನೀಡಿದೆ. 2 ವರ್ಷಗಳ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ 23 ವರ್ಷದ ಯುವಕನಿಂದ ಪೊಲೀಸ್ ಕಾನ್ಸ್ ಟೇಬಲ್ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಬಳಿಕ ಅಷ್ಟು ಮೊತ್ತ ನೀಡಲಿಲ್ಲವೆಂದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದ ಎಂದು ತಿಳಿದುಬಂದಿದೆ.

ಸದ್ಯ ದುಡ್ಡು ಕೊಡಲಾಗದ ಪೊಲೀಸರ ಆವಾಜಿಗೆ ಹೆದರಿದ ಪಿ. ಮಜ್ಜಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಗ್ರಾಮೀಣ ಮಂಡಲದ ಪಿಡಿಮಗೋಯಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಯುವಕ ಮಜ್ಜಿ ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಎರಡು ಸಾರಾಯಿ ಬಾಟಲ್ ಗಳನ್ನು ಅಕ್ರಮವಾಗಿ ಸಾಗಿಸಿದ್ದಾನೆ ಎಂದು ಕೃಷ್ಣಾ ಜಿಲ್ಲೆಯ ಚಿಲಕಲು ಪೊಲೀಸ್ ಠಾಣೆಯಲ್ಲಿ 2020 ನೇ ಸಾಲಿನಲ್ಲಿ ಪ್ರಕರಣವೊಂದು ದಾಖಲಾಗಿತ್ತು.ಕಾನ್ಸ್ ಟೇಬಲ್ ಶಿವರಾಮಕೃಷ್ಣ ಪ್ರಸಾದ್ ಬೆದರಿಕೆ ಮಜ್ಜಿ ರಾಜಮಂಡ್ರಿಗೆ ಮರಳಿದವನೆ ಸೆಲ್ಫಿ ವಿಡಿಯೋ ಮಾಡಿಟ್ಟು, ಅದರಲ್ಲಿ ಪ್ರಕರಣದ ವಿವರಣೆ ಹೇಳಿಕೊಂಡಿದ್ದಾನೆ. ಅದೇ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್ ಪಿ ಸಿದ್ದಾರ್ಥ ಕೌಶಲ್ ಅವರು ಕಾನ್ಸ್ ಟೇಬಲ್ ಶಿವರಾಮಕೃಷ್ಣ ಪ್ರಸಾದ್ ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್ ಇನ್ಸ್ಪೆಕ್ಟರ್ ದುರ್ಗಾಪ್ರಸಾದ್ ರಾವ್ ನನ್ನೂ ಸಸ್ಪೆಂಡ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

12/08/2021 11:13 am

Cinque Terre

95.57 K

Cinque Terre

2

ಸಂಬಂಧಿತ ಸುದ್ದಿ