ಬೆಂಗಳೂರು: ವಾರಾಂತ್ಯದ ಮೋಜು-ಮಸ್ತಿಗಾಗಿ ಹೊರಟಿದ್ದ ಗಣ್ಯರ ಮಕ್ಕಳು, ರಾಜಕಾರಣಿಗಳು ಮಕ್ಕಳು ಹಾಗೂ ಮೊಮ್ಮಕ್ಕಳ ವಾಹನಗಳನ್ನು ಪೊಲೀಸ್ ವಶಪಡಿಸಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಇದು ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳ ಈ ಕಾರ್ಯಾಚರಣೆಗೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸಮೀಪದ ಎನ್.ಎಚ್ 75 ರಸ್ತೆಯ ಟೋಲ್ ಬಳಿ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಹಾಗೂ ಮೂರು ಆರ್‌ಟಿಒ ತನಿಖಾ ತಂಡಗಳು ಬೆಂಗಳೂರು ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್‌ಗಳ ಸೈಲೆನ್ಸರ್ ವಿರೂಪಗೊಳಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿಯಾದ ಸೌಂಡ್ ಹಾಗೂ ವಾಯು ಮಾಲಿನ್ಯ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದ್ದಾರೆ. ಜತೆಗೆ ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಜಾಲಿ ರೈಡ್ ಮಾಡಲು ಹೊರಟಿದ್ದ ಯುವಕ ಯುವತಿಯರ ಬೈಕ್ ಹಾಗೂ ಕಾರುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ.
PublicNext
02/08/2021 10:13 am