ನವದೆಹಲಿ: 'ಇದು ಜಸ್ಟ್ ಟ್ರೇಲರ್' ಎಂಬ ಎಚ್ಚರಿಕೆ ಪತ್ರವು ದೆಹಲಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ ಜಾಗದಲ್ಲಿ ಸಿಕ್ಕಿದೆ.
ದೆಹಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಸಂಭವಿಸಿದ ಲಘು ಸಾಮರ್ಥ್ಯದ ಐಇಡಿ ಸ್ಫೋಟ ಆತಂಕಕ್ಕೆ ಕಾರಣವಾಗಿದೆ. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ಸಂಭವಿಸಿದೆ. ಈ ಸ್ಥಳದಲ್ಲಿ ಲಕೋಟೆಯೊಂದು ಪತ್ತೆಯಾಗಿದ್ದು, ಅದರ ಮೇಲ್ಭಾಗದಲ್ಲಿ 'ಇಸ್ರೇಲ್ ರಾಜತಾಂತ್ರಿಕ ರಾಯಭಾರಿಗೆ' ಎಂದು ಬರೆಯಲಾಗಿದೆ.
ಪತ್ರದಲ್ಲಿ ಇರಾನ್‌ನ ಇಬ್ಬರು ಹುತಾತ್ಮರಾದ ಖಾಸಿಂ ಸೊಲೆಮನಿ ಮತ್ತು ಡಾ. ಮೊಹ್ಸೆನ್ ಫಖ್ರಿಜಾದೆಹ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಇಸ್ರೇಲ್ ಕಚೇರಿ ಮುಂದೆ ನಡೆದ ಬಾಂಬ್ ಸ್ಫೋಟದ ಹಿಂದೆ ಇರಾನ್ ವ್ಯಕ್ತಿಗಳ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಆರೋಪವನ್ನು ಇಸ್ರೇಲ್ ರಾಯಭಾರ ಕಚೇರಿ ನಿರಾಕರಿಸಿದೆ.
PublicNext
30/01/2021 11:53 am