ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುತ್ತೂಟ್ ಫೈನಾನ್ಸ್ ದರೋಡೆಕೋರರು ಅಂದರ್ 25 ಕೆಜಿ ಚಿನ್ನ ವಶ

ಆನೇಕಲ್: 18 ಗಂಟೆಯಲ್ಲಿ ಹೊಸೂರು ಮುತ್ತೂಟ್ ಫೈನಾನ್ಸ್ ಶಾಖೆ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ದರೋಡೆಕೋರರು ಹಾಡಹಗಲೇ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 25 ಕೆಜಿ ಚಿನ್ನ ಮತ್ತು ನಗದು ದರೋಡೆ ನಡೆದಿತ್ತು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಹೈದರಾಬಾದ್ ಸಮೀಪದ ಸಂಸತ್ ಪುರ ಹೆದ್ದಾರಿ ಬಳಿ ಕಳ್ಳರನ್ನು ಅರೆಸ್ಟ್ ಮಾಡಿದ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ಕಂಟೇನರ್ ಲಾರಿ, ಏಳು ನಾಡ ಪಿಸ್ತೂಲ್, ಎರಡು ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಉತ್ತರ ಭಾರತ ಮೂಲದವರಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ನಡೆದ 18 ಗಂಟೆಗಳಲ್ಲಿ ದರೋಡೆಕೋರರನ್ನು ಬಂಧಿಸಿದ್ದಕ್ಕಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ತಮಿಳುನಾಡು ಪೊಲೀಸರನ್ನು ಅಭಿನಂದಿಸಿದ್ದಾರೆ.

Edited By : Nirmala Aralikatti
PublicNext

PublicNext

23/01/2021 01:11 pm

Cinque Terre

92.98 K

Cinque Terre

1

ಸಂಬಂಧಿತ ಸುದ್ದಿ