ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಆರಂಭಿಸಲಾಗಿರುವ ಲುಲು ಮಳಿಗೆಯಲ್ಲಿ ಇತ್ತೀಚೆಗೆ ಕೆಲವರು ನಮಾಜ್ ಮಾಡಿದ್ದಾರೆ.
ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ನಮಾಜ್ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಈ ಬಗ್ಗೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಲಕ್ನೋ ಪೊಲೀಸರು 'ಧಾರ್ಮಿಕ ದ್ವೇಷ ಬೆಳೆಸುವ ಯತ್ನ' ಎಂಬ ಆರೋಪದ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲುಲು ಮಾಲ್ ಅಧಿಕಾರಿಗಳು ನಮಾಜ್ ಮಾಡಿದವರು ಲುಲು ಮಾಲ್ ಉದ್ಯೋಗಿಗಳಲ್ಲ. ಮಾಲ್‌ಗೆ ಭೇಟಿ ನೀಡಿದ್ದ ಗ್ರಾಹಕರು ಅಲ್ಲಿ ನಮಾಜ್ ಮಾಡಿದ್ದಾರೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
16/07/2022 01:37 pm