ಜೈಪುರ: ನೀವು ಅನೇಕ ಕೊಲೆಗಳನ್ನು ಮಾಡಿರುತ್ತೀರಿ. ಪ್ರವಾದಿಗಾಗಿ ಇನ್ನೊಂದು ಕೊಲೆ ಮಾಡಲು ಸಾಧ್ಯ ಇಲ್ಲವೇ ಎಂದು ಮತ್ತೋರ್ವ ಮುಸ್ಲಿಂ ಮೂಲಭೂತವಾದಿಯೊಬ್ಬ ಧಾರ್ಮಿಕ ಹಿಂಸಾಚಾರಕ್ಕೆ ಕರೆ ನೀಡಿದ್ದಾನೆ.
ಇದು ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಕೊಲೆಗೂ ಮುಂಚಿನ ವಿಡಿಯೋ ಎನ್ನಲಾಗಿದೆ. ಕೊಲೆಯ ನಂತರ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿರುವವನ ಹೆಸರು ರಿಯಾಜ್ ಮೊಹಮ್ಮದ್ ಅಕ್ತಾರಿ.
ನಾನು ನನ್ನ ಮುಸ್ಲಿಂ ಬಂಧುಗಳಿಗೆ ಮತ್ತೊಂದು ಸಂದೇಶ ನೀಡಲು ಬಯಸುತ್ತೇನೆ. ಎಲ್ಲರಿಗೂ ನನ್ನ ಕುಟುಂಬ ಏನಾಗುತ್ತದೆ? ಪರಿವಾರಕ್ಕೆ ಏನಾಗುತ್ತದೆ? ಎನ್ನುವ ಚಿಂತೆ ಇರುತ್ತದೆ. ನನಗೂ ಒಂದು ಕುಟುಂಬವಿದೆ, ಕೆಲಸವಿದೆ. ಅದರ ಚಿಂತೆ ಬಿಟ್ಟುಬಿಡಿ. ನೀವು ಎಷ್ಟೋ ಕೊಲೆಗಳನ್ನು ಮಾಡುತ್ತೀರಿ ಪ್ರವಾದಿಗಾಗಿ ಏಕೆ ಒಂದು ಕೊಲೆಯನ್ನು ಮಾಡಬಾರದು? ಹೆದರಬೇಡಿ, ನಮಗೆ ಅಲ್ಹಾನ ಆಶ್ರಯವಿದೆ. ಹೆಚ್ಚೆಂದರೆ ಜೈಲಿಗೆ ಹಾಕುತ್ತಾರೆ.
PublicNext
29/06/2022 03:33 pm