ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಲಿಂಗಕಾಮ ಅಪರಾಧವಲ್ಲ, ಒಟ್ಟಿಗೆ ಬಾಳಲು ನಮಗೆ ಅವಕಾಶ ಕೊಡಿ: ಪ್ರೇಯಸಿಗಾಗಿ ಯುವತಿ ಕಣ್ಣೀರು

ತಿರುವನಂತಪುರಂ: 'ಸಲಿಂಗಕಾಮ ಅಪರಾಧವಲ್ಲ, ಒಟ್ಟಿಗೆ ಬಾಳಲು ನಮಗೆ ಅವಕಾಶ ಕೊಡಿ' ಎಂದು ಯುವತಿಯೊಬ್ಬರು ತನ್ನ ಪ್ರೇಯಸಿಗಾಗಿ ಕಣ್ಣೀರಿಡುತ್ತಿರುವ ಪ್ರಸಂಗವೊಂದು ಕೇರಳದ ಕೊಯಿಕ್ಕೋಡ್​ನಲ್ಲಿ ಬೆಳಕಿಗೆ ಬಂದಿದೆ.

ಹೀಗೆ ತಮ್ಮ ಪ್ರೀತಿಗಾಗಿ ಹೋರಾಟ ನಡೆಸಿರುವ ಜೋಡಿಯನ್ನು ಅಲುವಾ ಮೂಲದ ಆಧಿಲಾ ನಸ್ರಿನ್​ (22) ಮತ್ತು ಕೊಯಿಕ್ಕೋಡ್​ ಮೂಲದ ಫಾತಿಮಾ ನೋರಾ (23) ಎಂದು ಗುರುತಿಸಲಾಗಿದೆ. ಈ ಜೋಡಿ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಆದರೆ ಎರಡು ಕುಟುಂಬ ಇಬ್ಬರ ಸಲಿಂಗಕಾಮಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಇಬ್ಬರು ಒಟ್ಟಿಗೆ ಬಾಳಲು ಸಾಕಷ್ಟು ಹೋರಾಟ ನಡೆಸುತ್ತಿದ್ದು, ಪೊಲೀಸ್​ ಇಲಾಖೆ ಮತ್ತು ನ್ಯಾಯಾಲಯದ ನೆರವು ಕೋರಿದ್ದಾರೆ.

2018ರ ಸೆಪ್ಟೆಂಬರ್​ 6ರಂದು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ಎಲ್​ಜಿಬಿಟಿಕ್ಯೂ ಹಕ್ಕನ್ನು ಎತ್ತಿಹಿಡಿದೆ. ಆದರೂ ಕೇರಳ ಜೋಡಿಗೆ ಈ ಹಕ್ಕು ಸಿಗುತ್ತಿಲ್ಲ. ನೋರಾಳಿಂದ ತನ್ನನ್ನು ಬಲವಂತವಾಗಿ ದೂರ ಮಾಡಿದ್ದಕ್ಕೆ ಆಧಿಲಾ ಪೊಲೀಸರ ನೆರವು ಕೋರಿದ್ದಾರೆ. ಅಲ್ಲದೆ, ಬದುಕುವುದಾದರೆ ನೋರಾ ಜೊತೆಗಷ್ಟೇ ಎಂಬ ನಿರ್ಧಾರಕ್ಕೆ ಬಂದಿರುವ ಆಧಿಲಾ, ಮಾಧ್ಯಮದ ಮುಂದೆ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾಳೆ.

ಸೌದಿ ಅರೇಬಿಯಾದಲ್ಲಿ 11ನೇ ತರಗತಿ ಓದುವಾಗ ಆಧಿಲಾ, ನೋರಾಳನ್ನು ಭೇಟಿಯಾಗಿದ್ದರು. ಎಲ್ಲರಂತೆಯೇ ಇಬ್ಬರ ಸ್ನೇಹ ಆರಂಭವಾಗಿದ್ದು, ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿ ಮತ್ತೊಂದು ಮಜಲಿಗೆ ಹೊರಳುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇಬ್ಬರ ಪಾಲಕರು ಕೂಡ ಫ್ರೆಂಡ್ಸ್​ ಆಗಿರುವುದರಿಂದ ಆಧಿಲಾ ಮತ್ತು ನೋರಾಳನ್ನು ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್​ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಆದರೆ ಈ ಮಧ್ಯೆ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ಮಾಹಿತಿ ಸಿಕ್ಕಿದ್ದು, ಒಂದೇ ಕಾಲೇಜಿಗೆ ಇಬ್ಬರನ್ನು ಸೇರಿಸುವ ನಿರ್ಧಾರದಿಂದ ಹಿಂದೆ ಸರೆದಿ ಬೇರೆ ಬೇರೆ ಕಾಲೇಜಿಗೆ ಕಳುಹಿಸಿದ್ದಾರೆ.

ಪೋಷಕರು ಆಧಿಲಾ ಹಾಗೂ ಫಾತಿಮಾ ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ಇದರಿಂದ ಬೇಸತ್ತ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಬೆಳೆಸುತ್ತಾರೆ. ಅಲ್ಲದೆ, ಇಬ್ಬರು ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು ಮತ್ತು ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ. ಈ ಮಧ್ಯೆ ಇಬ್ಬರು ಮೇ 19ರಂದು ತಮ್ಮ ಮನೆಗಳನ್ನು ತೊರೆಯುತ್ತಾರೆ. ಇಬ್ಬರು ಕೊಯಿಕ್ಕೋಡ್‌ನ ಆಶ್ರಯಧಾಮದಲ್ಲಿ ಆಶ್ರಯ ಪಡೆದಿದ್ದರು. ಆದರೆ ಪಾಲಕರ ಕೈಗೆ ಮತ್ತೆ ಸಿಕ್ಕಿಬೀಳುತ್ತಾರೆ. ಇಬ್ಬರು ಒಟ್ಟಿಗೆ ಬಾಳಲು ಅನುಮತಿ ನೀಡುವಾಗಿ ಭರವಸೆ ನೀಡಿ ನನ್ನನ್ನು ಆಶ್ರಯಧಾಮದಿಂದ ಪಾಲಕರು ಅಲುವಾಗೆ ಕರೆದೊಯ್ದರು ಎಂದು ಆಧಿಲಾ ಹೇಳಿದ್ದಾರೆ. ಆದರೆ, ಮನೆಯಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದರು ಎಂದು ಆಧಿಲಾ ಆರೋಪಿಸಿದ್ದಾರೆ. ಈ ಸಂಬಂಧ ಆಧಿಲಾ ವಿಡಿಯೋ ಮೂಲಕವೂ ನೋವನ್ನು ಹಂಚಿಕೊಂಡಿದ್ದಾಳೆ.

Edited By : Vijay Kumar
PublicNext

PublicNext

31/05/2022 05:22 pm

Cinque Terre

52.43 K

Cinque Terre

0