ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಗಣೇಶ ವಿಸರ್ಜನೆ ವೇಳೆ ಬಿಂದಾಸ್ ಮೆರವಣಿಗೆ: ಬಿಜೆಪಿ ನಾಯಕರಿಂದ ನಿಯಮ ಉಲ್ಲಂಘನೆ

ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಸರ್ಕಾರ ಜಾರಿಗೊಳಿಸಿದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಬಿಜೆಪಿ ನಾಯಕರು ಅದ್ಧೂರಿಯಾಗಿ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಿದ್ದಾರೆ. ಇಷ್ಟೇ ಅಲ್ಲ. ತಾವು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

ಇದೇ ವೇಳೆ ಜಿಲ್ಲೆಯ ಹಲವೆಡೆ ಬಾರ್ ತೆರೆದುಕೊಂಡಿದ್ದವು ಎಂಬ ಮಾಹಿತಿ ಇದೆ. ಇತ್ತೀಚೆಗಷ್ಟೇ ಕೋವಿಡ್ ನಿಮಯ ಉಲ್ಲಂಘಿಸಿ ಟಗರಿನ ಕಾಳಗ ಆಯೋಜಿಸಿದ್ದ ಬಿಜೆಪಿ ನಾಯಕರು ಈಗ ಮತ್ತೆ ಈಗ ಅದ್ಧೂರಿ ಮೆರವಣಿಗೆ ಮಾಡಿ ಡಿಜೆ ಹಚ್ಚುವ ಮೂಲಕ ಗಣೇಶ ವಿಸರ್ಜನೆ ಮಾಡಿದ್ದಾರೆ. ಮಾಸ್ಕ್ ಇಲ್ಲ. ಸಾಮಾಜಿಕ ಅಂತರವಂತೂ ಮೊದಲೇ ಇಲ್ಲ. ಹೀಗಿದ್ದರೂ ಇವರ ಮೇಲೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯಾದಗಿರಿ ಜನತೆ ದೂರಿದ್ದಾರೆ.

Edited By : Manjunath H D
PublicNext

PublicNext

01/10/2021 10:33 am

Cinque Terre

93.92 K

Cinque Terre

19

ಸಂಬಂಧಿತ ಸುದ್ದಿ