ಮಂಡ್ಯ: ತರಬೇತಿ ನಿರತ ಪೋಲೀಸರು ಮಂಡ್ಯ ಎಸ್‌ಪಿ ಡಾ.ಅಶ್ವಿನಿ ಮನೆಯ ಜೀತದಾಳುಗಳೇ ಎಂಬ ಪ್ರಶ್ನೆ ಎದ್ದಿದ್ದು, ಎಸ್‌ಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ಅನುಮತಿ ಪಡೆಯದೆ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ನಿವಾಸದಲ್ಲಿದ್ದ ಮರಗಳನ್ನು ಏಕಾಏಕಿ ಕಡಿದು ಹಾಕಿಸಲಾಗಿದೆ. ಅಷ್ಟೇ ಅಲ್ಲದೆ ಮರಗಳನ್ನು ತೆರೆವುಗೊಳಿಸಲು ಪೊಲೀಸ್ ವಾಹನ ಹಾಗೂ ತರಬೇತಿ ನಿರತ ಪೊಲೀಸರನ್ನೇ ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಮಂಡ್ಯ ಎಸ್‌ಪಿ ಡಾ.ಅಶ್ವಿನಿ ಅವರು ಕೆಲ ತಿಂಗಳ ಹಿಂದೆ ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚಿನ ಮರಗಳನ್ನು ಕಡಿದು ಸಾಗಿಸಿದ್ದರು. ಇನ್ನು ಕೋವಿಡ್ ಸಂದರ್ಭದಲ್ಲಿ ಮನೆ, ಕಚೇರಿ ನವೀಕರಣ ಮಾಡಿಸಿರುವ ಆರೋಪಿಗಳು ಕೇಳಿ ಬಂದಿವೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, "ಕೊರೊನಾದಿಂದ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ" ಎಂದು ಪ್ರಶ್ನಿಸಿದ್ದಾರೆ. ಇನ್ನು ಕಾನೂನು ಉಲ್ಲಂಘನೆ ಮಾಡಿರುವ ಎಸ್‌ಪಿ ಅಶ್ವಿನಿ ವಿರುದ್ಧ ಕ್ರಮಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
PublicNext
14/09/2021 08:29 pm