ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಪ್ರವಾಸದಲ್ಲಿರುವ ವೇಳೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರಕತಾ ಕ್ರಮವಾಗಿ ಇಂಟರ್‌ನೆಟ್ ಸ್ಥಗಿತ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಾವೇಶ ಕೂಡಾ ಆಯೋಜಿಸಲಾಗಿದೆ. ಈ ಹೊತ್ತಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆ ಕೂಡಾ ಆಗಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಯಾವುದೇ ಕೃತ್ಯಕ್ಕೆ ತಡೆ ಒಡ್ಡುವ ಕಾರಣಕ್ಕಾಗಿ ಇಂಟರ್‌ನೆಟ್ ಸ್ಥಗಿತ ಮಾಡಲಾಗಿದೆ
ಲೋಹಿಯಾ ಅವರನ್ನು ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಪ್ರಧಾನ ನಿರ್ದೇಶಕರನ್ನಾಗಿ ನಿಯೋಜಿಸಲಾಗಿತ್ತು. ಲೋಹಿಯಾ ಅವರ ಮನೆಗೆಲಸದ ಸಹಾಯಕ ತಲೆಮರೆಸಿಕೊಂಡಿದ್ದಾನೆ. ಸಹಾಯಕ ಯಾಸಿರ್ ಮುಖ್ಯ ಹಂತಕ ಎಂದು ಶಂಕಿಸಲಾಗಿದೆ. ಆತನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ರಾತ್ರಿಯೇ ಜಮ್ಮುಗೆ ಆಗಮಿಸಿದರು. ಅದೇ ದಿನ ರಾತ್ರಿ ಕಾರಾಗೃಹ ಡಿಜಿಪಿ ಹೇಮಂತ್ ಲೋಹಿಯಾ ಅವರ ಹತ್ಯೆ ಆಗಿದೆ ಹೇಮಂತ್ ಲೋಹಿಯಾ ಅವರನ್ನು ಅವರ ಮನೆ ಕೆಲಸದ ವ್ಯಕ್ತಿಯೇ ಹತ್ಯೆ ಮಾಡಿರುವ ಸಾಧ್ಯತೆ ಇದೆಯಾದರೂ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿದೆ.
ಲೋಹಿಯಾ ಅವರ ದೇಹದ ಮೇಲೆ ಸುಟ್ಟ ಗಾಯದ ಗುರುತುಗಳೂ ಇವೆ. ಈ ಹತ್ಯೆಯನ್ನು ತಾವೇ ಮಾಡಿರೋದಾಗಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಭಾರತೀಯ ಘಟಕ ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫೋರ್ಸ್ ಹೊಣೆ ಹೊತ್ತುಕೊಂಡಿದೆ. ಅಮಿತ್ ಶಾ ಕಣಿವೆ ರಾಜ್ಯ ಭೇಟಿ ದಿನವೇ ಈ ಕೃತ್ಯ ನಡೆದಿರೋದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಆದರೆ, ಈ ಹತ್ಯೆಗೂ ಅಮಿತ್ ಶಾ ಭೇಟಿಗೂ ಯಾವುದೇ ಸಂಬಂದ ಇರುವ ಮಾಹಿತಿ ಲಭ್ಯವಾಗಿಲ್ಲ.
PublicNext
04/10/2022 04:32 pm