ವಾಷಿಂಗ್ಟನ್: ಅಲ್ ಖೈದಾ ನಾಯಕ ಉಗ್ರ ಅಲ್-ಜವಾಹಿರಿಯನ್ನು ಡ್ರೋಣ್ ದಾಳಿ ಮೂಲಕ ಹತ್ಯೆ ಮಾಡಲಾಗಿದೆ.
ಅಪ್ಘಾನಿಸ್ತಾನದ ಕಾಬೂಲ್‌ನಲ್ಲಿ ಡ್ರೋಣ್ ದಾಳಿ ನಡೆಸಿದ ಅಮೆರಿಕ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ನಡೆಸಿದ ದಾಳಿಯಲಿ ಜವಾಹಿರಿ ಕತೆ ಮುಗಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಾವಾಹಿರಿ ಸಾವನ್ನು ಖಚಿತಪಡಿಸಿದ್ದಾರೆ. ಅಮೆರಿಕದ ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ಮಾಡಿದ್ದ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು 2011ರಲ್ಲೇ ಅಮೆರಿಕ ಹೊಡೆದುರುಳಿಸಿತ್ತು. ಈಗ ಜವಾಹಿರಿ ಹತ್ಯೆ ಮೂಲಕ ಮತ್ತೊಮ್ಮೆ ಅಲ್ ಖೈದಾ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಭಾನುವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆದಿದೆ.
PublicNext
02/08/2022 07:30 am