ಕೈವ್: ಉಕ್ರೇನ್‌ನ ಕೇಂದ್ರ ನಗರವಾದ ಕ್ರೆಮೆನ್‌ಚುಕ್‌ನಲ್ಲಿರುವ ಶಾಪಿಂಗ್ ಮಾಲ್‌ನ ಮೇಲೆ ಸೋಮವಾರ ರಷ್ಯಾದ ಕ್ಷಿಪಣಿ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆಗಳ ಮುಖ್ಯಸ್ಥರು ತಿಳಿಸಿದ್ದಾರೆ.
ದಾಳಿಯ ಸಮಯದಲ್ಲಿ 1,000 ಕ್ಕೂ ಹೆಚ್ಚು ನಾಗರಿಕರು ಮಾಲ್‌ನ ಒಳಗಿದ್ದರು ಎಂಬ ವರದಿಗಳನ್ನು ಉಲ್ಲೇಖಿಸಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ʻಸಾವಿನ ಸಂಖ್ಯೆಯನ್ನು ಊಹಿಸಲು ಸಾಧ್ಯವಿಲ್ಲʼ ಎಂದಿದ್ದಾರೆ.
ದೃಶ್ಯದ ಚಿತ್ರಗಳು ಶಾಪಿಂಗ್ ಸೆಂಟರ್‌ನಿಂದ ದೈತ್ಯಾಕಾರದ ಕಪ್ಪು ಹೊಗೆ ಆವರಿಸಿರುವುದನ್ನು ತೋರಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ತುರ್ತು ಸಿಬ್ಬಂದಿಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
PublicNext
28/06/2022 09:53 am